ಕ್ರೈಂವಿಡಿಯೋವೈರಲ್ ನ್ಯೂಸ್

ಖರೀದಿಸಿದ ತಕ್ಷಣ ಶೋರೂಂನ ಎದುರಿನ ಗುಂಡಿಗೆ ಬಿದ್ದ ಕಾರು..! ಆಕೆಗೆ ಡ್ರೈವಿಂಗ್ ಗೊತ್ತಿರಲಿಲ್ಲವೇ..? ಇಲ್ಲಿವೆ ವೈರಲ್ ವಿಡಿಯೋ

237

ನ್ಯೂಸ್ ನಾಟೌಟ್: ಹೊಸ ಕಾರು ಖರೀದಿಸಬೇಕು ಎಂಬುದು ಪ್ರತಿಯೊಬ್ಬರ ಬದುಕಿನ ಕನಸಾಗಿರುವುದು ಸಹಜ ಆದರೆ, ಡ್ರೈವಿಂಗ್ ಗೊತ್ತಿಲ್ಲದಿದ್ದಾಗ ಗೊತ್ತಿದ್ದವರನ್ನು ಕರೆದುಕೊಂಡು ಹೋಗಿ ಅವರ ಮೂಲಕ ತರುವುದು ಸೂಕ್ತ.

ಇತ್ತೀಚೆಗೆ, ಒಂದು ಕುಟುಂಬ ಹೊಸ ಮಾರುತಿ ಸೆಲೆರಿಯೊ (Maruti Celerio) ಕಾರನ್ನು ಖರೀದಿಸಲು ಮಾರುತಿ ಸುಜುಕಿ ಶೋರೂಂಗೆ ತೆರಳಿದ್ದಾರೆ. ಕಾರನ್ನು ಪಡೆದುಕೊಳ್ಳುವ ಚಿತ್ರವನ್ನು ತೆಗೆದುಕೊಂಡು ಖುಷಿಪಟ್ಟಿದ್ದಾರೆ.ಮಾರುತಿ ಶೋರೂಂ ಉದ್ಯೋಗಿಯೊಬ್ಬರು ಔಪಚಾರಿಕವಾಗಿ ಕಾರಿನ ಕೀಗಳನ್ನು ಅವರಿಗೆ ಹಸ್ತಾಂತರಿಸಿದರು.

ಕಾರನ್ನು ವಿತರಣೆ ಪಡೆದ ನಂತರ ಅದರ ಮಾಲೀಕರು ಕಾರಿನೊಳಗೆ ಕುಳಿತು ಕಾರನ್ನು ಚಲಾಯಿಸಿದ್ದಾರೆ. ಈ ಕುರಿತು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಾರಿನ ಚಾಲಕನ ಸೀಟಿನಲ್ಲಿ ಮಹಿಳೆಯೊಬ್ಬರು ಕುಳಿತಿರುವುದು ಕಂಡು ಬಂದಿದೆ. ಕಾರು ಹತ್ತಿದ ಬಳಿಕ ಕಾರನ್ನು ಸರಿಸಲು ಯತ್ನಿಸಿದ್ದಾರೆ.ನಂತರ ಕಾರು ವೇಗವಾಗಿ ಸಾಗಿದ್ದು, ಅವರು ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾರೆ.

ನಿಯಂತ್ರಣ ತಪ್ಪಿ ಶೋರೂಂನಿಂದ ಹೊರಗೆ ಹೋಗಿ ಎದುರಿನ ಪೊದೆಗೆ ಉರುಳಿದೆ. ದುರದೃಷ್ಟವಶಾತ್, ಹೊಸ ಕಾರು ಖರೀದಿಸಿದ ನಂತರ, ಶೋ ರೂಂನಿಂದ ಹೊರಬಂದ ನಂತರ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ. ಅಪಘಾತಕ್ಕೀಡಾದ ಕಾರು ನೋಡಿ ಅಲ್ಲಿದ್ದವರು ಓಡಿ ಬಂದು ಕಾರಿನೊಳಗಿದ್ದವರನ್ನು ರಕ್ಷಿಸಿದ್ದಾರೆ.

ಘಟನೆಯ ವೀಡಿಯೋ ನೋಡಿದರೆ ಕಾರು ಚಲಾಯಿಸಿದ ಮಹಿಳೆಗೆ ಡ್ರೈವಿಂಗ್ ಅನುಭವವೇ ಇಲ್ಲವೆಂದು ಹೇಳಲಾಗಿದೆ. ವಿಷಯ ತಿಳಿದ ಸಮೀಪದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ಅಪಘಾತದಲ್ಲಿ ಕಾರಿನ ಮುಂಭಾಗದ ಭಾಗಕ್ಕೆ ಭಾರೀ ಹಾನಿಯಾಗಿದ್ದು, ಕೂಡಲೇ ಕಾರನ್ನು ತೆಗೆದುಕೊಂಡು ಶೋರೂಂ ಸರ್ವೀಸ್ ಸೆಂಟರ್‌ಗೆ ರಿಪೇರಿ ಮಾಡಿಸಲಾಯಿತು.

See also  ಆಸ್ಪತ್ರೆಯ ಮೆಟ್ಟಿಲಿನ ಮೇಲೆಯೇ ಮಹಿಳೆಗೆ ಹೆರಿಗೆ! ಅಮಾನವೀಯವಾಗಿ ವರ್ತಿಸಿದ ಆಸ್ಪತ್ರೆ ಸಿಬ್ಬಂದಿ! ಏನಿದು ಮನಕಲಕುವ ಘಟನೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget