ಕ್ರೈಂದೇಶ-ಪ್ರಪಂಚದೇಶ-ವಿದೇಶ

ಶಾಪಿಂಗ್‌ ಮಾಲ್‌ ನಲ್ಲಿ ಆಟಿಕೆ ರೈಲು ಪಲ್ಟಿಯಾಗಿ 10ರ ಬಾಲಕ ಸಾವು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ಈಗಿನ ದಿನಗಳಲ್ಲಿ ಮೈದಾನದಲ್ಲಿ ಹೋಗಿ ಆಡೋದಕ್ಕಿಂತ ಸಾಮಾನ್ಯವಾಗಿ ಪೋಷಕರು ಮಕ್ಕಳ ಮನೋರಂಜನೆಗಾಗಿ ಮಾಲ್‌ಗಳಿಗೆ ಹೋಗಿ ಅಲ್ಲಿ ಆಟಿಕೆಗಳ ಜೊತೆ ಮಕ್ಕಳನ್ನು ಆಟವಾಡಿಸುತ್ತಾರೆ. ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಟಿಕೆ ರೈಲಿನ ಬೋಗಿ ಉರುಳಿಬಿದ್ದು 10 ವರ್ಷದ ಬಾಲಕ ಸಾವನಪ್ಪಿದ ಘಟನೆ ಚಂಡೀಗಢದ ಮಾಲ್ ವೊಂದರಲ್ಲಿ ನಡೆದಿದೆ.

ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಹಬಾಜ್ (10 ವರ್ಷ) ಸಾವನಪ್ಪಿದ ಬಾಲಕ ಎಂದು ಗುರುತಿಸಲಾಗಿದೆ. ಈತ ಶನಿವಾರ ಜೂನ್ 22ರಂದು ರಾತ್ರಿ ತನ್ನ ಕುಟುಂಬದವರ ಜೊತೆ ‘ಎಲಾಂಟೆ ಮಾಲ್’ ಗೆ ಬಂದಿದ್ದಾನೆ.

ಅಲ್ಲಿ ಆತ ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಆಗ ರೈಲಿನ ಬೋಗಿ ಪಲ್ಟಿಯಾಗಿ ಬಾಲಕ ಸಾವನಪ್ಪಿದ್ದಾನೆ. ಆತನ ಜೊತೆ ಕುಳಿತಿದ್ದ ಆತನ ಸೋದರ ಸಂಬಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Click 👇

https://newsnotout.com/2024/06/sanatana-darma-kannada-news-bengaluru-udayanidhi-stalin
https://newsnotout.com/2024/06/umapati-and-pratam-threated-by-chetan-who-was-the-fan-of-darshan-kannada-news

Related posts

ಕಡಬ: ತಾಳಿ ಕಟ್ಟುವ ವೇಳೆ ನಿರಾಕರಿಸಿದ ವಧು..! ಠಾಣೆಯ ಮೆಟ್ಟಿಲೇರಿದ ಬಳಿಕ ಸಿಕ್ಕಿತು ಬಿಗ್ ಟ್ವಿಸ್ಟ್..!

ಕಲ್ಲಾಪು: ಸ್ಕೂಟಿ ಚಕ್ರಕ್ಕೆ ಸಿಲುಕಿಕೊಂಡ ಸೀರೆಯ ಸೆರಗು..! ರಸ್ತೆಗೆಸೆಯಲ್ಪಟ್ಟು ಮಹಿಳೆ ದಾರುಣ ಸಾವು

ಇಂಡೋನೇಷ್ಯಾದಲ್ಲಿ 90% ಮುಸ್ಲಿಮರಿದ್ದಾರೆ, 11,000 ದೇಗುಲಗಳಿವೆ ಆದ್ರೂ ಗಲಭೆ ಆಗಿಲ್ಲ ಏಕಂದ್ರೆ ಅಲ್ಲಿ RSS ಇಲ್ಲ ಎಂದ್ರಾ ಪ್ರಕಾಶ್ ರಾಜ್..? ಏನಿದು ವಿವಾದ..?