ಕರಾವಳಿಕ್ರೈಂ

ಅಮೆರಿಕದ ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಮಗು ಸೇರಿದಂತೆ ಎಂಟು ಮಂದಿ ಸಾವು

ನ್ಯೂಸ್‌ ನಾಟೌಟ್‌:‌ ಅಮೆರಿಕದ ಟೆಕ್ಸಾಸ್‌ ನಗರದ ಮಾಲ್‌ ವೊಂದರಲ್ಲಿ ಶನಿವಾರ (ಮೇ 6 ರಂದು) ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಗಿದೆ.

ಗುಂಡಿನ ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದು, ಆ ಬಳಿಕ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗು ಸೇರಿದಂತೆ 8 ಮಂದಿ ಹತರಾಗಿದ್ದು, 7 ಮಂದಿಗೆ ಗಾಯಗಳಾಗಿವೆ ಎಂದು ನಗರ ಪೊಲೀಸ್ ಮುಖ್ಯಸ್ಥ ಬ್ರಿಯಾನ್ ಹಾರ್ವೆ ಹೇಳಿದ್ದಾರೆ.

ನಗರದ ಡಲ್ಲಾಸ್‌ನಲ್ಲಿರುವ ಮಾಲ್‌ಗೆ ನುಗ್ಗಿದ ಬಂದೂಕುಧಾರಿ ವ್ಯಕ್ತಿಯೊಬ್ಬ ಅಲ್ಲಿದ್ದ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಆತಂಕದಿಂದ ಅಲ್ಲಿದ್ದ ಮಂದಿ ಹೊರಗೆ ಓಡಿದ್ದಾರೆ. ಟೆಕ್ಸಾಸ್‌ನಲ್ಲಿರುವ ಅಲೆನ್ ಪ್ರೀಮಿಯಂ ಔಟ್‌ಲೆಟ್‌ಗಳ ಮಾಲ್‌ನಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರಿಗೆ ಕೂಡಲೇ ಮಾಹಿತಿ ಬಂದಿದೆ. ಪೊಲೀಸರು ಬಂದೂಕುಧಾರಿ ವ್ಯಕ್ತಿಯನ್ನು ಶೂಟ್‌ ಮಾಡಿ ಹತ್ಯೆಗೈದಿದ್ದಾರೆ.

Related posts

ಸುಳ್ಯ: ರಿಕ್ಷಾ – ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ

ಬೆಂಗಳೂರು: ಬಿಸಿಲಿನ ತಾಪಕ್ಕೆ ರೈಲ್ವೇ ಹಳಿಯ ರಬ್ಬರ್‌ಗೆ ಬೆಂಕಿ, 20 ನಿಮಿಷ ಮೆಟ್ರೋ ಸಂಚಾರ ಬಂದ್

ಸುಳ್ಯ:ಕೋಳಿ ಸಾರಿಗಾಗಿ ಅಪ್ಪ-ಮಗನ ಕಿತ್ತಾಟ,ಮಗನ ದುರಂತ ಅಂತ್ಯ