ಬೆಂಗಳೂರುರಾಜಕೀಯ

‘ಫ್ರೀ ಬಸ್ ಯಾನ’ ಸಂಭ್ರಮಿಸುತ್ತಿರುವ ವೇಳೆಯಲ್ಲೇ ಆಘಾತದ ಸುದ್ದಿ!,ಬಸ್ ರಶ್ ಆಗಿ ಬಾಗಿಲಲ್ಲಿ ನೇತಾಡುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು ಮೃತ್ಯು

ನ್ಯೂಸ್ ನಾಟೌಟ್ :ಒಂದೆಡೆ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರು ಬಸ್ ನಲ್ಲಿ ಫ್ರೀಯಾಗಿ ಓಡಾಡ್ಲಿ ಅಂತ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು.ಇಡೀ ರಾಜ್ಯದ ಮಹಿಳಾ ಮಣಿಗಳು ಸಂಭ್ರಮಿಸುತ್ತಿರುವ ಈ ಸಮಯದಲ್ಲಿ ಭಾರಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.

ಬಸ್ ತುಂಬಾ ರಶ್ ಇತ್ತು ಅಂತ ಹೇಳಿ ಬಾಲಕಿ ಮಧು ಕುಂಬಾರ(14) ಬಸ್ಸಿನ ಬಾಗಿಲಲ್ಲಿ ನಿಂತಿದ್ದಾಳೆ.ಈ ವೇಳೆ ಬಸ್ ಟರ್ನ್ ಆಗುವಾಗ ಆಕೆ ಹಿಡಿದುಕೊಂಡಿದ್ದ ಸರಳಿನ ಹಿಡಿತ ತಪ್ಪಿದೆ.ಹೀಗಾಗಿ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾಳೆ.ಗಂಭೀರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಗಾಗಲೇ ಆಕೆ ಮೃತಪಟ್ಟದ್ದಾಳೆಂದು ತಿಳಿದು ಬಂದಿದೆ.ಈ ದುರ್ಘಟನೆ ಸಂಭವಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುನಸೂರು ಗ್ರಾಮದ ಬಳಿ.

ಈ ಕುರಿತು ಸ್ಥಳೀಯರು ಪ್ರತಿಕ್ರಿಯೆ ನೀಡಿದ್ದು,ಈ ಭಾಗದಲ್ಲಿ ಸಮಸ್ಯೆ ಯಾವಾಗ್ಲೂ ಇದೆ.ಸಮರ್ಪಕ ರೀತಿಯಲ್ಲಿ ಇಲ್ಲಿ  ಬಸ್ ಗಳಿಲ್ಲ.ಬಸ್ ಬಂದಾಗ ಎಲ್ಲರೂ ಹೋಗಬೇಕು.ಮನೆಗೆ ಸರಿಯಾದ ಸಮಯಕ್ಕೆ ತಲುಪಬೇಕಾದರೆ, ಅಥವಾ ಶಾಲಾ ಸಮಯದಲ್ಲಿಯೂ ಶಾಲಾ ಟೈಮ್ ಗೆ ತಲುಪಬೇಕಾದರೆ  ಬಂದಿರುವ ಬಸ್ ಗಳಲ್ಲೇ ಹೋಗಬೇಕು.ಅದರಲ್ಲೂ ಹೆಣ್ಮಕ್ಕಳು ಸಂಜೆ ವೇಳೆಯೊಳಗೆ ಮನೆ ಸೇರಬೇಕಾಗುತ್ತದೆ.ಹೀಗಾಗಿ ರಶ್ ಇದ್ದರೂ ಅನಿವಾರ್ಯವಾಗಿ ಹೋಗಲೇಬೇಕಾಗುತ್ತದೆ.ಬಾಲಕಿ ಶಾಲೆಗೆ ಸರಿಯಾದ ಸಮಯಕ್ಕೆ ತಲುಪಬೇಕೆನ್ನುವ ಧಾವಂತದಲ್ಲಿ ಬಸ್ ಏರಿದ್ದಾಳೆ.ಆಕೆ ಬಸ್ ಹತ್ತಲೇ ಬಾರದಾಗಿತ್ತು ಎಂದು ಕಂಬನಿ ಮಿಡಿದಿದ್ದಾರೆ.

Related posts

ಅರಂತೋಡು: ಅಡ್ತಲೆ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ , ಮಾಜಿ ಸಚಿವ ಎಸ್.ಅಂಗಾರರಿಗೆ ಸನ್ಮಾನ,ನೂತನ ಶಾಸಕಿ ಕು.ಭಾಗೀರಥಿ ಮುರಳ್ಯರಿಗೆ ಅಭಿನಂದನಾ ಕಾರ್ಯಕ್ರಮ

ರಾತ್ರೋ ರಾತ್ರಿ ಡಿಸಿಎಂ ಡಿಕೆಶಿ ವಿರುದ್ಧ ನಗರದೆಲ್ಲೆಡೆ ಪೋಸ್ಟರ್..! ಏನಿದು ಗಲ್ಲಿ ಗಲ್ಲಿಗಳಲ್ಲಿ ಬಿತ್ತಿಪತ್ರ..?

ಹಿಂದೂ ಧರ್ಮಕ್ಕೆ ಮತಾಂತರಗೊಂಡದ್ದೇಕೆ ಈ ಮುಸ್ಲಿಂ ಕುಟುಂಬ? ಈ ಘಟನೆ ನಡೆದದ್ದೆಲ್ಲಿ..? ಕುಟುಂಬದ ಮುಖ್ಯಸ್ಥ ಹೇಳಿದ್ದೇನು?