ದೇಶ-ಪ್ರಪಂಚ

ಬಾಲಕಿಯನ್ನು ಅಪಹರಿಸಿ ಅತ್ಯಾಚಾರದವೆಸಗಿದ ನಾಲ್ವರು ದುರುಳರು,ವಿಡಿಯೋ ಮಾಡಿ ಹರಿಬಿಟ್ಟ ಕಾಮುಕರು ಪೊಲೀಸ್ ಬಲೆಗೆ

ನ್ಯೂಸ್ ನಾಟೌಟ್ : ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಹರಿಬಿಟ್ಟ ಬೆಚ್ಚಿಬೀಳಿಸುವ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಬಾಲಕಿ 17 ವರ್ಷವಾಗಿದ್ದು, ವಾರಣಾಸಿಯ ದಶಾಶ್ವಮೇಘ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಭಾಗವಹಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ನಾಲ್ವರು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ.

ಆಕೆ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ್ದಲ್ಲದೇ ವಿಡಿಯೋ ಮಾಡಿ ಹರಿಬಿಟ್ಟಿದ್ದ ಅಮಾನುಷ ಘಟನೆ ವರದಿಯಾಗಿದೆ.ಮೇ 19ರಂದು ನಡೆದ ಈ ಭೀಕರ ಘಟನೆಯ ವಿಡಿಯೋ ಎಲ್ಲೆಡೆ ವೈರಲ್​ ಆದ ನಂತರ ಬಾಲಕಿಯ ಸಂಬಂಧಿಕರಿಗೆ ಹಾಗೂ ಕುಟುಂಬದವರಿಗೆ ಬಾಲಕಿಯ ಮೇಲಿನ ದೌರ್ಜನ್ಯದ ಬಗ್ಗೆ ತಿಳಿದು ಬಂದಿದೆ. ಈ ಕುರಿತು ಎಫ್​ಐಆರ್​ ದಾಖಲಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮನೆ ನಿರ್ಮಾಣಕ್ಕಾಗಿ ಬಂದ ಸಾಲದ ಹಣ ಪಡೆದು ಪ್ರಿಯಕರನ ಜತೆ ಪರಾರಿಯಾದ ವಿವಾಹಿತ ಮಹಿಳೆಯರು!

ಭಾರತದಲ್ಲಿ ನಾಪತ್ತೆಯಾಗಿದ್ದ ಬಾಂಗ್ಲ ಸಂಸದನ ಕೇಸ್ ಗೆ ಬಿಗ್ ಟ್ವಿಸ್ಟ್..! ಕತ್ತು ಹಿಸುಕಿ, ಚರ್ಮ ಸುಲಿದ ಸ್ಥಿತಿಯಲ್ಲಿ ಶವ ಪತ್ತೆ..!