ಕರಾವಳಿರಾಜಕೀಯ

ಗುತ್ತಿಗೆದಾರರಿಂದ ಹಣ ಪಡೆದಿಲ್ಲ ಎಂದದ್ದೇಕೆ ಶೋಭಾ ಕರಂದ್ಲಾಜೆ..? ಗೋಬ್ಯಾಕ್ ಶೋಭಾ ಅಭಿಯಾನ..!

218

ನ್ಯೂಸ್ ನಾಟೌಟ್: ಚಿಕ್ಕಮಗಳೂರು- ಉಡುಪಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆಂಬ ಮಾಹಿತಿ ನನಗೂ ಇದೆ. ನಾನು ಇದುವರೆಯೂ ಯಾವ ಗುತ್ತಿಗೆದಾರನಿಂದಲೂ ಒಂದು ರೂ.ಪಡೆದಿಲ್ಲ, ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ.

ನಿಜವಾದ ಬೆಜೆಪಿ ಕಾರ್ಯಕರ್ತರು ಈ ರೀತಿ ಆರೋಪವನ್ನು ಮಾಡುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಮ್ಮ ಪಕ್ಷವೇ ಆಗಲಿ ವಿರೋಧ ಪಕ್ಷವೇ ಆಗಲಿ ಅಭಿವೃದ್ಧಿ ಆಧಾರದಲ್ಲಿ ಚರ್ಚೆಗೆ ಸಿದ್ದ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.

ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ಈ ರೀತಿ ಮಾಡಿಸಿರಬಹುದು, ಅವರು ಹಿಂದಿದ್ದ ಪಕ್ಷದಲ್ಲಿ ಇಂತಹ ಚಾಳಿಯನ್ನು ನಡೆಸಿದ್ದಾರೆ. ಇಲ್ಲೂ ನಡೆಸಿದ್ದಾರೆ. ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳುವುದಿಲ್ಲ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ತಮ್ಮ ವಿರುದ್ದ ಗೋಬ್ಯಾಕ್ ಶೋಭಾ ಅಭಿಯಾನಕ್ಕೆ ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ.

ಆದರೆ, ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸ ಮಾಡಬಾರದು. ನಾವು ನಮ್ಮ ವಿರುದ್ದ ನಿಲ್ಲುವ ಅಭ್ಯರ್ಥಿಯನ್ನು ಅಲ್ಲಗಳೆಯುವುದಿಲ್ಲ. ಅಭಿವೃದ್ಧಿ ಆಧಾರದ ಮೇಲೆ ಮತದಾರರ ಬಳಿ ತೆರಳುತ್ತೇವೆ ಎಂದರು. ಚಿಕ್ಕಮಗಳೂರು- ಉಡುಪಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆಂಬ ಮಾಹಿತಿ ನನಗೂ ಇದೆ. ನಾನು ಇದುವರೆಯೂ ಯಾವ ಗುತ್ತಿಗೆದಾರನಿಂದಲೂ ಒಂದು ರೂ.ಪಡೆದಿಲ್ಲ ಅವರ ಮುಖವನ್ನು ಕೂಡ ನೋಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು. ಕೇಂದ್ರದ ಮಂತ್ರಿಗಳೊಂದಿಗೆ ಜಗಳವಾಡಿ ಇಲ್ಲಿಗೆ ಅನುದಾನ ತಂದಿದ್ದೇನೆ. ಅಭಿಯಾನ, ಪತ್ರ ಚಳುವಳಿ ಯಾವುದು ಎಫೇಕ್ಟ್ ಆಗಲ್ಲ. ನಾನು ಮಂತ್ರಿಯಾಗಿ ಒಳ್ಳೇ ಕೆಲಸ ಮಾಡಿದ್ದೇನೆ.‌ ಇದೇ‌ ರೀತಿ ಹಿಂದಿನ ಚುನಾವಣೆಯಲ್ಲೂ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.

See also  ಕಾಂತಮಂಗಲ: ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ..! ವಾಹನಗಳು ಜಖಂ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget