ನ್ಯೂಸ್ ನಾಟೌಟ್: ನಟ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಗೆದ್ದು ಬಂದಿರುವ ವಿಷಯ ನಿಮ್ಗೆ ಗೊತ್ತಿದೆ. ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯಿಂದ ಕೆಲ ಕಾಲ ರೆಸ್ಟ್ ತೆಗೆದುಕೊಂಡಿದ್ದ ಶಿವಣ್ಣ ಮತ್ತೆ ಕಮ್ಬ್ಯಾಕ್ ಮಾಡಿದ್ದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದುದು ಬಹುತೇಕರಿಗೆ ತಿಳಿದೇ ಇರಲಿಲ್ಲ.ಯಾಕೆಂದರೆ ಸಿನಿಮಾದಲ್ಲಿ ಅಷ್ಟು ಆ್ಯಕ್ಟೀವ್ ಆಗಿದ್ದರು.
ಇದೀಗ ಅವರು ಮಾಧ್ಯಮವೊಂದಕ್ಕೆ ನೀಡಿರುವ ಶಾಕಿಂಗ್ ಸಂದರ್ಶನವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಶಿವರಾಜ್ ಕುಮಾರ್ ಅವರು, ನನಗೆ ಮೈತುಂಬಾ ಸಮಸ್ಯೆ ಇದೆ. ನಾನೂ ಮನುಷ್ಯನೇ ಸಮಸ್ಯೆ ಬಂದೇ ಬರುತ್ತದೆ. ಹಾಗೆ ನೋಡುವುದಾದರೆ ಈಗ ಕ್ಯಾನ್ಸರ್ ಚಿಕಿತ್ಸೆ ಆಗಿದೆ. ಆದರೆ ಅದಕ್ಕೂ ಮೊದಲು ಪ್ಯಾರೀಸ್ನಲ್ಲಿ ಮೆದುಳಿನ ಸರ್ಜರಿಯಾಗಿತ್ತು ಎಂದಿದ್ದಾರೆ. ಆಸೆಗೊಬ್ಬ ಮೀಸೆಗೊಬ್ಬ ಚಿತ್ರೀಕರಣದ ಸಮಯದಲ್ಲಿ ಕೈಗೆ ಫ್ರಾಕ್ಚರ್ ಆಗಿತ್ತು. ಕಾಲಿಗೆ ಅದೆಷ್ಟು ಸಲ ಫ್ರಾಕ್ಚರ್ ಆಗಿದ್ಯೋ ಗೊತ್ತಿಲ್ಲ. ಭುಜದಲ್ಲಿಯೂ ಸಮಸ್ಯೆ ಇದೆ. ಬಲ ಭುಜಕ್ಕೆ rotator cuff ನಿಂದ ಬಳಲುತ್ತಿದ್ದೇನೆ. ಹೃದಯಕ್ಕೂ ಸ್ಟೆಂಟ್ ಹಾಕಿದ್ದಾರೆ ಎನ್ನುವ ಶಾಕಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ.
ಶಿವಣ್ಣಗೆ ಇಷ್ಟೆಲ್ಲಾ ಸಮಸ್ಯೆ ಇವೆಯಾ? ಆದರೂ ಯಾವುದನ್ನೂ ತೋರಿಸಿಕೊಳ್ಳಲೇ ಇಲ್ಲ. ಶಿವರಾಜ್ ಕುಮಾರ್ ಅವರು ಇಷ್ಟೆಲ್ಲ ಅನಾರೋಗ್ಯವಿದ್ದರೂ ಈ ಹಿಂದೆ ಪತ್ನಿ ಗೀತಾ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಕೆಲ ದಿನಗಳ ಹಿಂದೆ ಇದರ ಬಗ್ಗೆಯೂ ಅವರು ಮಾತನಾಡಿದ್ದರು. ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಶಿವರಾಜ್ ಕುಮಾರ್ ಅವರು, ಈ ಬಗ್ಗೆ ಕಮೆಂಟ್ಗಳು ಬರುವುದನ್ನು ನಾನು ಫೇಸ್ ಮಾಡುತ್ತೇನೆ. ಏಕೆಂದರೆ ಗೀತಾ ನನ್ನ ಪತ್ನಿ. ಅವರು ಸದಾ ನನಗೆ ಬೆನ್ನೆಲುಬಾಗಿ ನಿಂತವರು. ಅವರಿಗೆ ರಾಜಕೀಯಕ್ಕೆ ಹೋಗಬೇಕು ಎನ್ನುವ ಆಸೆ ಇತ್ತು, ಅದಕ್ಕೆ ನಾನು ಸಪೋರ್ಟ್ ಮಾಡಿದ್ದೇನೆ ಅಷ್ಟೇ. ನಾಳೆ ಅವರು ಬೇರೆ ಪಾರ್ಟಿಗೆ ಹೋದರೂ ನೀವು ಸಪೋರ್ಟ್ ಮಾಡುವಿರಾ ಎನ್ನುವ ಪ್ರಶ್ನೆಗೆ, ಶಿವಣ್ಣ ಅವರು ಹೌದು, ಅಷ್ಟೆನೇ.. ನಾನು ಯಾವ ಪಕ್ಷಕ್ಕೆ ಹೋದರೂ ಸಪೋರ್ಟ್ ಮಾಡುತ್ತೇನೆ ಅಷ್ಟೇ ಎಂದಿದ್ದರು.