Latestರಾಜ್ಯಸಿನಿಮಾ

ಶಿವರಾಜ್ ಕುಮಾರ್ ಸಿನಿ ಜರ್ನಿಯ 40 ವರ್ಷ ತುಂಬಿದ್ದಕ್ಕೆ ಶುಭ ಹಾರೈಸಿದ ಕಮಲ್ ಹಾಸನ್..! ಶಿವಣ್ಣ ಜೀವನ ಚರಿತ್ರೆ ಪುಸ್ತಕ ಬಿಡುಗಡೆ..!

683

ನ್ಯೂಸ್‌ ನಾಟೌಟ್‌: ಡಾ.ರಾಜ್​ ಕುಮಾರ್ ಮಗ ಎನಿಸಿಕೊಂಡ್ರೂ​.. ತಮ್ಮ ಸ್ವಂತ ನಟನೆ.. ಕಲೆಯಿಂದ ಶಿವಣ್ಣ ತಮ್ಮ 40 ವರ್ಷ ಸಿನಿ ಜರ್ನಿ ಪೂರೈಸಿದ್ದಾರೆ. ಈ ಸಾಧನೆಯ ಅಂಗವಾಗಿ ಈ ಮೊದಲೇ ಪ್ಲಾನ್ ಆದಂತೆ ಶಿವಣ್ಣನ ಜೀವನ ಚರಿತ್ರೆಯ ಶ್ರೀಮುತ್ತು ಪುಸಕ್ತ ರಿಲೀಸ್ ಆಗಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಶಿವಣ್ಣ ದಂಪತಿ ಸಮ್ಮುಖದಲ್ಲಿ ಪುಸ್ತಕ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಹಾಡು-ನೃತ್ಯದ ಮೂಲಕ ಶಿವಣ್ಣ ನೆರೆದಿದ್ದವರನ್ನ ರಂಜಿಸಿದ್ದಾರೆ.

ಇತ್ತೀಚೆಗಷ್ಟೆ ಕನ್ನಡ ಬಗ್ಗೆ ತಮಿಳು ನಟ ಕಮಲ್​ ಹಾಸನ್ ಎಲ್ಲಾ ತಿಳಿದ ಮೇಧಾವಿಯಂತೆ ಕನ್ನಡದ ಬಗ್ಗೆ ಮಾತನಾಡಿ ಆಕ್ರೋಶ ಭುಗಿಲೆಬ್ಬಿಸಿದ್ದರು.ಅದಾದ ಬಳಿಕ ಥಗ್ ​ಲೈಫ್ ಸಿನಿಮಾ ಬ್ಯಾನ್, ಮತ್ತು ಗಳಿಕೆಯಲ್ಲೂ ಸೋತಿತ್ತು. ಇದೀಗ ಕಮಲ್​ ಹಾಸನ್​, ಶಿವಣ್ಣನ 40 ವರ್ಷದ ಸಿನಿ ಜರ್ನಿಗೆ ಶುಭ ಹಾರೈಸಿದ್ದಾರೆ. ಅದು ಕೂಡ ಕನ್ನಡದಲ್ಲಿ ವಿಶ್ ಮಾಡಿರೋದು ವಿಶೇಷ.

ಶಿವಣ್ಣ ಚೆನ್ನಾಗಿದ್ದೀರಾ..? ಎಂದು ಕನ್ನಡದಲ್ಲೇ ಕೇಳಿರುವ ನಟ ಕಮಲ್‌ ಹಾಸನ್‌ ʻನಿಮ್ಮ 50 ವರ್ಷದ ವಾರ್ಷಿಕೋತ್ಸವಕ್ಕೆ ಇಬ್ಬರೂ ಕೂತು ಮತ್ತೆ ಮಾತನಾಡೋಣʼ ಎಂದಿದ್ದಾರೆ. ಮುಂದುವರೆದು ಯಾವಾಗಲೂ ಹೀಗೆ ನಗುತಲಿರಿ. ಇನ್ನೂ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಿ. ನಮ್ಮ ಪ್ರೀತಿ ಹೀಗೆ ಮುಂದುವರೆಯಲಿದೆ ಎಂದಿದ್ದಾರೆ.

ಜೊತೆಗೆ ಶಿವಣ್ಣನಿಗೆ ತೆಲುಗು ಸ್ಟಾರ್​ ನಟರಾದ ಅಕ್ಕಿನೇನಿ ನಾಗಾರ್ಜುನ.. ವಿಜಯ್​ ದೇವರಕೊಂಡ ಶುಭ ಹಾರೈಸಿದ್ದಾರೆ. 40 ವರ್ಷ ಪೂರೈಸೋದು ಸುಲಭದ ಮಾತಲ್ಲ ಅಂತಾ ಹಾಡಿಹೊಗಳಿದ್ದಾರೆ.

ಚಾರಣಕ್ಕೆ ಬಂದಿದ್ದ 10 ವಿದ್ಯಾರ್ಥಿಗಳು ದಾರಿ ತಪ್ಪಿ ಕಾಡಿನಲ್ಲಿ ನಾಪತ್ತೆ..! ಮಂಗಳೂರಿನ ಬಂಡಾಜೆ ಮಾರ್ಗವಾಗಿ ಹತ್ತಿದ್ದ ವಿದ್ಯಾರ್ಥಿಗಳು ಮಧ್ಯರಾತ್ರಿ ಪತ್ತೆ..!

See also  ಮತ್ತೆ ಬಿಗ್‌ ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಲಾಯರ್‌ ಜಗದೀಶ್‌..?, ಕಾರ್ಯಕ್ರಮದಲ್ಲಿ ದಿನಕ್ಕೊಂಡು ಟ್ವಿಸ್ಟ್‌
  Ad Widget   Ad Widget   Ad Widget   Ad Widget   Ad Widget   Ad Widget   Ad Widget