ನ್ಯೂಸ್ ನಾಟೌಟ್: ಮೊನ್ನೆಯಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ತವರಿಗೆ ವಾಪಾಸ್ಸಾಗಿದ್ದರು.ಇದೀಗ ಶಿವರಾಜಕುಮಾರ್ ಅವರು ಅವರ ಹಿಟ್ ಚಿತ್ರಗಳ್ಲಲೊಂದಾದ ‘ನಮ್ಮೂರ ಮಂದಾರ ಹೂವೆ’ ಚಿತ್ರೀಕರಣ ಮಾಡಿದ ಸ್ಥಳಕ್ಕೆ 29 ವರ್ಷಗಳ ಬಳಿಕ ವಿಶ್ವ ವಿಖ್ಯಾತ ಯಾಣಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಶಿರಸಿಯಲ್ಲಿ ವಿಶ್ರಾಂತಿಗಾಗಿ ವಾಸ್ತವ್ಯ ಮಾಡಿದ್ದು, ಬಿಡುವಿನ ವೇಳೆಯಲ್ಲಿ ಪ್ರವಾಸಿ ತಾಣ ಯಾಣಕ್ಕೆ ಪತ್ನಿ ಗೀತಾ , ಶಾಸಕ ಭೀಮಣ್ಣ ನಾಯ್ಕ, ಅವರ ಪುತ್ರ ಅಶ್ವಿನ್ ಭೀಮಣ್ಣ ಹಾಗೂ ಸ್ನೇಹಿತರೊಂದಿಗೆ ತೆರಳಿ ಸುತ್ತಾಟ ನಡೆಸಿ ರಿಲ್ಯಾಕ್ಸ್ ಆದರು.ಯಾಣದ ಶಿಖರಗಳನ್ನು ವೀಕ್ಷಿಸಿ ಪ್ರಕೃತಿ ಸೌಂದರ್ಯ ಆಸ್ವಾದಿಸಿ ಫೊಟೊ ಕೂಡ ಕ್ಲಿಕ್ಕಿಸಿಕೊಂಡರು.