ಕರಾವಳಿ

ಶಿವಮೊಗ್ಗ ಇರಿತ ಪ್ರಕರಣ: ಆರೋಪಿ ಜಬೀಉಲ್ಲಾ  ಕಾಲಿಗೆ ಪೊಲೀಸ್ ಗುಂಡು

ನ್ಯೂಸ್ ನಾಟೌಟ್: ಶಿವಮೊಗ್ಗ ಚೋರಿ ಇರಿತ ಪ್ರಕರಣ ವಿಕೋಪಕ್ಕೆ ತಿರುಗುತ್ತಿರುವ ಹಂತದಲ್ಲಿ ಖಾಗಿ ಪಡೆ ಬಿಗಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ ಅಹಿತಕರ ಕೋಮು ಸಂಘರ್ಷಕ್ಕೆ ವೇದಿಕೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಿಕೊಂಡಿದೆ.

ಉಪ್ಪಾರ ಕೇರಿಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪ್ರೇಮ್ ಗೆ ಚೂರಿ ಇರಿದು ಬೈಕ್ ಬಿಟ್ಟು ಪರಾರಿಯಾಗಿದ್ದರು. ಆ ಪ್ರಕರಣದ ಆರೋಪಿ ಎನ್ನಲಾದ ಜಬೀಉಲ್ಲಾ ಎಂಬಾತನ ಕಾಲಿಗೆ ಪೊಲೀಸರು ತಡರಾತ್ರಿ ಫೈರಿಂಗ್ ಮಾಡಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋ ಶಂಕರ ಲೇಔಟ್ ನಲ್ಲಿ ಜಬೀವುಲ್ಲಾ ಬಂಧನಕ್ಕೆ ತೆರಳಿದ್ದ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದು, ಸದ್ಯ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Related posts

ಸುಳ್ಯ: ಕೊಡಗಿನ ನೆಲ್ಯಹುದಿಕೇರಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ..!ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ

ಅಮರ ಸಂಘಟನಾ ಸಮಿತಿ (ರಿ) ಸುಳ್ಯ ವತಿಯಿಂದ ಚೊಕ್ಕಾಡಿ ಪ್ರೌಢಶಾಲೆಗೆ ಫ್ಯಾನ್ ಹಸ್ತಾಂತರ

ಒಡಿಯೂರು: ಮಾರ್ಬಲ್ ತುಂಬಿಕೊಂಡು ಬಂದಿದ್ದ ಲಾರಿ ಪಲ್ಟಿ, ನಾಲ್ವರು ಕಾರ್ಮಿಕರ ಕಾಲು ಛಿದ್ರ, ಗಂಭೀರ ಗಾಯ