ಕ್ರೀಡೆ/ಸಿನಿಮಾರಾಜಕೀಯವೈರಲ್ ನ್ಯೂಸ್

ಸಿಎಂ ಆದ್ರಾ ಅರಸೀಕೆರೆ ಶಾಸಕ ಶಿವಲಿಂಗೇಗೌಡ..? ಏನಿದು ಹೊಸ ರಾಜಕೀಯ ಬೆಳವಣಿಗೆ?

175

ನ್ಯೂಸ್‌ ನಾಟೌಟ್‌: ಮಂತ್ರಿಯಾಗುವುದಕ್ಕೆ ಪರದಾಡುತ್ತಿದ್ದ ಶಾಸಕ, ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದು ಸಹಜ. ‘ನಮ್ ಶಾಲೆ’ (Nam School) ಹೆಸರಿನ ಚಿತ್ರದಲ್ಲಿ ಶಾಸಕ ಶಿವಲಿಂಗೇಗೌಡ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮುಖ್ಯಮಂತ್ರಿ ಆಗಿ ಕನ್ನಡ ಸಿನೆಮಾವೊಂದರ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

ಕೃಷ್ಣ ಬೆಳ್ತಂಗಡಿ ಅವರು ನಿರ್ದೇಶನ ಮಾಡುತ್ತಿರುವ ʼಇದು ನಮ್ಮ ಶಾಲೆ’ ಎಂಬ ಶೀರ್ಷಿಕೆ​ ಇರುವ ಚಿತ್ರದ ಚಿತ್ರೀಕರಣವು ಅರಸೀಕೆರೆ ಹೊರವಲಯದಲ್ಲಿರುವ ಗಿಜಿ ಎಂಬಲ್ಲಿನ ಮನೆಯೊಂದರಲ್ಲಿ ನಡೆಯುತ್ತಿದೆ.

ಈ ಚಿತ್ರದ ಕೆಲವು ದೃಶ್ಯಗಳಲ್ಲಿ ಸಿಎಂ ಪಾತ್ರಕ್ಕೆ ಶಿವಲಿಂಗೇ ಗೌಡ ಬಣ್ಣ ಹಚ್ಚಿದ್ದಾರೆ. ಮುಖ್ಯಮಂತ್ರಿ ಪಾತ್ರದ ಅಭಿನಯದ ಜೊತೆಗೆ ಡಬ್ಬಿಂಗ್ ಮಾಡಲು ಶಿವಲಿಂಗೇಗೌಡರು ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ.

ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಿವಲಿಂಗೇಗೌಡ ಜೆಡಿಎಸ್​ ಪಕ್ಷ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಬಳಿಕ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಈ ಮೂಲಕ ಅರಸೀಕೆರೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ಜಯ ಸಾಧಿಸಿದ್ದಾರೆ.

See also  ಪಾಕಿಸ್ತಾನದ ಹಿರಿಯ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್..! ಹತ್ಯೆಗೀಡಾದ ಪಾಕಿಸ್ತಾನಿ ಉಗ್ರರರನ್ನು ʻಹುತಾತ್ಮರುʼ ಎಂದ ಉಗ್ರ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget