ಕ್ರೈಂವೈರಲ್ ನ್ಯೂಸ್

ಶಿವನನ್ನು ನೋಡಲು ಬಂದ 54 ಮಂದಿಯನ್ನು ಶಿವನ ಪಾದ ಸೇರಿಸಿದನೇ ವರುಣ? ಶಿವ ದೇವಾಲಯದ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿರುವ ಶಂಕೆ! ಏನಿದು ದುರಂತ?

ನ್ಯೂಸ್ ನಾಟೌಟ್: ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಈವರೆಗೂ 54 ಮಂದಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶ ಒಂದರಲ್ಲೇ 51 ಜನ ಮೃ* ತಪಟ್ಟಿದ್ದಾರೆ, ಜೊತೆಗೆ ಉತ್ತರಾಖಂಡದಲ್ಲಿ 3 ಜನ ಮೃ* ತಪಟ್ಟಿದ್ದಾರೆ.

ಶಿಮ್ಲಾದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೂ ಕುಸಿತದಲ್ಲಿ ಈವರೆಗೂ(15 ಆಗಸ್ಟ್) 14 ಶವಗಳನ್ನು ಹೊರತೆಗೆಯಲಾಗಿದೆ. ಸಮ್ಮರ್ ಹಿಲ್ ಪ್ರದೇಶದ ಶಿವ ದೇವಾಲಯದ ಅವಶೇಷಗಳ ಅಡಿಯಲ್ಲಿ ಇನ್ನೂ ಹೆಚ್ಚಿನ ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮಂಡಿ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 19 ಮಂದಿ ನಿಧನರಾಗಿದ್ದಾರೆ. ಸೋಲನ್ ಜಿಲ್ಲೆಯಲ್ಲಿ ಒಂದು ಕುಟುಂಬದ ಏಳು ಸದಸ್ಯರು ಸೇರಿದಂತೆ 11 ಜನರು ಕೊನೆಯುಸಿರೆಳೆದ ಬಗ್ಗೆ ವರದಿಯಾಗಿದೆ. ಕುಲು, ಕಿನ್ನೌರ್, ಲಾಹೌಲ್ ಮತ್ತು ಸ್ಪಿತಿ ಹೊರತುಪಡಿಸಿ ರಾಜ್ಯದ 12 ಜಿಲ್ಲೆಗಳ ಪೈಕಿ ಒಂಬತ್ತು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ತಿಳಿಸಿದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆಯ ಶಿಮ್ಲಾ-ಕಲ್ಕಾ ರೈಲು ಮಾರ್ಗವು ಶಿಮ್ಲಾದ ಸಮ್ಮರ್ ಹಿಲ್ ಬಳಿ 50 ಮೀಟರ್ ಸೇತುವೆ, ಭೂಕುಸಿತದಿಂದ ಹಾನಿಗೊಳಗಾಗಿದೆ. ಟ್ರ್ಯಾಕ್‍ನ ಒಂದು ಭಾಗ ನೇತಾಡುತ್ತಿದೆ. ಈ ಭಾಗದಲ್ಲಿ ಸೇನೆ, ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್, ಐಟಿಬಿಪಿ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಉತ್ತರಾಖಂಡದಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆ. ಭೂಕುಸಿತ ಸಹ ಸಂಭವಿಸಿದ್ದು ಬದರಿನಾಥ್, ಕೇದಾರನಾಥ ಮತ್ತು ಗಂಗೋತ್ರಿ ದೇಗುಲಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಕಡಿತವಾಗಿದೆ. ಇದರ ಬೆನ್ನಲ್ಲೇ ಚಾರ್ಧಾಮ್ ಯಾತ್ರೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಕೇದಾರನಾಥ ಟ್ರೆಕ್ ಮಾರ್ಗದಲ್ಲಿ ಲಿಂಚೋಲಿಯಲ್ಲಿ ಕ್ಯಾಂಪ್‍ಗೆ ಭೂಕುಸಿತ ಸಂಭವಿಸಿದ್ದು, ನಾಲ್ಕು ಅಂಗಡಿಗಳಿಗೆ ಹಾನಿಯಾಗಿದೆ. ಇದರಲ್ಲಿ ನೇಪಾಳದ ಒಬ್ಬ ಪ್ರಜೆ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಾಪಾರಿ ನಾಪತ್ತೆಯಾಗಿದ್ದಾರೆ. ಋಷಿಕೇಶದ ಶಿವ ದೇವಾಲಯ ಮತ್ತು ಮೀರಾನಗರ ಪ್ರದೇಶಗಳ ಬಳಿ ಹೊಳೆಗಳಿಂದಲೂ ಎರಡು ಮೃ* ತದೇಹಗಳನ್ನು ಮೇಲೆತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗ ಯೋಜನೆಯ `ಎಡಿಟ್ II’ ಎಂಬ ಹೆಸರಿನ ಸುರಂಗದಲ್ಲಿ ನೀರು ನುಗ್ಗಿ 114 ಕಾರ್ಮಿಕರು ಸಿಲುಕಿಕೊಂಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಸುರಂಗದೊಳಗೆ ಸಂಗ್ರಹವಾದ ನೀರನ್ನು ಹೊರಹಾಕಿದ್ದಾರೆ. ಬಳಿಕ ಎಲ್ಲಾ 114 ಕಾರ್ಮಿಕರನ್ನು ಹಗ್ಗಗಳ ಸಹಾಯದಿಂದ ರಕ್ಷಿಸಲಾಗಿದೆ.
ಹರಿದ್ವಾರದಲ್ಲಿ ಗಂಗಾ ನದಿಯು 295.60 ಮೀಟರ್, ಅಪಾಯದ ಮಟ್ಟಕ್ಕಿಂತ 1.60 ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದರಿಂದ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಮೂಲಗಳು ತಿಳಿಸಿದೆ.

Related posts

ರಷ್ಯಾ ಯುದ್ಧ ಭೂಮಿಯಲ್ಲಿ ಕೇರಳದ ವ್ಯಕ್ತಿ ಸಾವು ಪ್ರಕರಣ..! ಯುವಕರನ್ನು ವಂಚಿಸಿ ರಷ್ಯಾಕ್ಕೆ ಕರೆದೊಯ್ಯಲು ಸಹಾಯ ಮಾಡಿದ್ದ ಮೂವರ ಬಂಧನ..!

“ಆ ನಿರ್ದೇಶಕ ನನ್ನನ್ನು ಹೊಟೇಲ್‌ ರೂಮ್‌ ಗೆ ಕರೆದಿದ್ದ..!” ಸಿನಿ ಜರ್ನಿಯ ಕರಾಳ ನೆನಪೊಂದನ್ನು ಬಿಚ್ಚಿಟ್ಟ ‌ʼಡರ್ಟಿ ಪಿಕ್ಚರ್‌ʼ ನಟಿ !

ಬೆಳ್ಳಾರೆ: ಚಿಲ್ಲರೆ ಗಲಾಟೆ, ಕೆ ಎಸ್ ಆರ್ ಟಿ ಸಿ ಬಸ್ ಕಂಡೆಕ್ಟರ್ ಕೆನ್ನೆಗೆ ಬಾರಿಸಿದ ಪ್ರಯಾಣಿಕ..!