ಕರಾವಳಿಕೊಡಗುವೈರಲ್ ನ್ಯೂಸ್

ಸಂದರ್ಶನದ ವೇಳೆ ಶರ್ಟ್ ಬಿಚ್ಚಲೆತ್ನಿಸಿದ ನಟ!,ಮಹಿಳಾ ಆ್ಯಂಕರ್ ಶಾಕ್ !,ಇಲ್ಲಿದೆ ವೈರಲ್ ವಿಡಿಯೋ..

ನ್ಯೂಸ್ ನಾಟೌಟ್ :ಕೆಲವೊಮ್ಮೆ ಕ್ಯಾಮರಾ ಮುಂದೆ ಏನೆಲ್ಲಾ ಅವಾಂತರಗಳಾಗುತ್ತಲೇ ಇರುತ್ತವೆ.ಇಂತಹ ಅದೆಷ್ಟೋ ಘಟನೆಗಳನ್ನು ನಾವು ಕಂಡಿದ್ದೇವೆ.ಕೆಲವೊಂದು ವಿಡಿಯೋಗಳು ಸಕತ್ ವೈರಲ್ ಕೂಡ ಆಗುತ್ತವೆ.ಇದೀಗ ಇಲ್ಲೊಂದು ವಿಡಿಯೋ ಅದಕ್ಕೆ ಸಾಕ್ಷಿಯಾಗಿದೆ.ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಡಿಯೋ ಭಾರಿ ವೈರಲ್ ಆಗಿವೆ.

ಇಲ್ಲಿ ತೆಲುಗು ಟಿವಿ ಆ್ಯಂಕರ್ ಒಬ್ಬಳು ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿಕೊಂಡಿದ್ದಾಳೆ.ಸಂದರ್ಶನಕ್ಕೆಂದು ಬಂದ ನಟನನ್ನು ಪ್ರಶ್ನೆ ಮಾಡುತ್ತಿದ್ದಂತೆ ಕಾಲೆಳೆದ ಪ್ರಸಂಗವೂ ನಡೆದಿದೆ.ಹೌದು,ಮಲಯಾಳಂ ನಟ ಶೈನ್​ ಟಾಮ್​ ಚಾಕೋ, ಕ್ಯಾಮೆರಾ ಮುಂದೆಯೇ ತಮ್ಮ ಬಟ್ಟೆಗಳನ್ನು ಬಿಚ್ಚಲು ಯತ್ನಿಸುವುದರೊಂದಿಗೆ ಮಹಿಳಾ ಆ್ಯಂಕರ್​, ಕಕ್ಕಾಬಿಕ್ಕಿಯಾಗುವಂತೆ ಮಾಡಿದ ಪ್ರಸಂಗ ಜರುಗಿದೆ.

ರಂಗಬಾಲಿ ನಿರ್ದೇಶಕ ಪವನ್​ ಬಾಸಮ​ಸೆಟ್ಟಿ ಮತ್ತು ಶೈನ್​ ಒಟ್ಟಿಗೆ ಸಂದರ್ಶನಕ್ಕೆ ಆಗಮಿಸಿದ್ದರು. ಒಂದು ಹಂತದಲ್ಲಿ ಆ್ಯಂಕರ್​, ಶೈನ್​ ಧರಿಸಿದ್ದ ಶರ್ಟ್​ ಕುರಿತು ಕಾಮೆಂಟ್​ ಮಾಡಿದ್ದರು. ದಿಢೀರನೇ ಶೈನ್​ ಅವರು ಶರ್ಟ್​ ಬಟನ್​ ಬಿಚ್ಚಲು ಆರಂಭಿಸಿದರು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಪವನ್ ಅವರನ್ನು​ ತಡೆಯಲು ಯತ್ನಿಸಿದರು. ಆದರೆ, ಆ್ಯಂಕರ್​ ಶೈನ್​ರನ್ನು ಹುರಿದುಂಬಿಸುವ ಮೂಲಕ ಕಾಲೆಳೆಯಲು ಯತ್ನಿಸಿದರು. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಯಾವಾಗ ಶೈನ್​ ಪ್ಯಾಂಟ್​ ಬಿಚ್ಚಲು ಮೇಲೆ ಏಳಲು ಪ್ರಯತ್ನಿಸಿದರೋ ಆ್ಯಂಕರ್ ಒಂದು ಕ್ಷಣ ಕಕ್ಕಾಬಿಕ್ಕಿಯಾದರು.​ ತಮ್ಮ ಮಾತನ್ನು ಹಿಂಪಡೆದು ಶೈನ್​ ಅವರನ್ನು ತಡೆದರು. ಈ ವೇಳೆ ಶೈನ್​ ಸುಮ್ಮನೆ ಕುಳಿತುಕೊಂಡಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮಲಯಾಳಂ ಸಿನಿಮಾ ರಂಗದಲ್ಲಿ ಖಳನಾಯಕನ ಪಾತ್ರಗಳಲ್ಲಿ ಮಿಂಚುತ್ತಿರುವ ಶೈನ್​, ಅನೇಕ ಸಂದರ್ಶನಗಳಲ್ಲಿ ಕೀಟಲೆಗಳನ್ನು ಮಾಡುವ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತಲೇ ಇರುತ್ತಾರೆ. ಈ ವಿಡಿಯೋ ಅದಕ್ಕೆ ಸಾಕ್ಷಿಯಾಗಿದೆ. 

Related posts

ಸಂಪಾಜೆಯ ವಲಯ ಕಟ್ಟಡ ಕಾರ್ಮಿಕರ ಸಂಘಟನೆಯ ಮೊದಲ ವಿಕೆಟ್ ಪತನ..!, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚಂದ್ರ ರಾಜೀನಾಮೆ

ಕೊಲ್ಲೂರು ಮೂಕಾಂಬಿಕೆ ಮತ್ತು ಉಡುಪಿ ಕೃಷ್ಣನ ದರ್ಶನ ಪಡೆದ ಆರಿಫ್ ಮೊಹಮ್ಮದ್ ಖಾನ್, ಈ ಬಗ್ಗೆ ಕೇರಳ ರಾಜ್ಯಪಾಲ ಹೇಳಿದ್ದೇನು..?

ನಾಳೆ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಭಾಗಿಯಾಗೊ ನಿರೀಕ್ಷೆ