Latestಚಿಕ್ಕಮಗಳೂರು

ಬಿಳಿ ಜಾಂಡೀಸ್ ನಿಂದ ಬಳಲಿ ಪ್ರಾಣ ಕಳೆದುಕೊಂಡ ೧೪ರ ಬಾಲಕಿ; ಏನಿದು ಬಿಳಿ ಜಾಂಡೀಸ್? ಇದರ ಲಕ್ಷಣಗಳೇನು?

1.1k
Spread the love

ನ್ಯೂಸ್‌ ನಾಟೌಟ್: ವಿದ್ಯಾರ್ಥಿನಿಯೋರ್ವಳು ಬಿಳಿ ಜಾಂಡಿಸ್ ಕಾಯಿಲೆಯಿಂದ ಬಳಲಿ ಮೃತಪಟ್ಟ ಘಟನೆ ಫೆ. 26ರ ಬುಧವಾರ ನಡೆದಿದೆ.ಹೆಗ್ಗೋಡಿನ ಐಸಿರಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಈಕೆ ಕೆಲ ದಿನಗಳಿಂದ ಬಿಳಿ ಜಾಂಡಿಸ್ ಕಾಯಿಲಿಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ಈಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು , ಆದರೆ ಈಕೆಗೆ ಕಿಡ್ನಿ ವೈಫಲ್ಯ ಸಹ ಉಂಟಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಕಾಲಿಕ ನಿಧನಕ್ಕೆ ಸಹ್ಯಾದ್ರಿ ಶಾಲಾ ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

ಏನಿದು ಬಿಳಿ ಜಾಂಡೀಸ್ ?

ಸಾಮಾನ್ಯ ಜಾಂಡೀಸ್ ಗಿಂತ ಬಹುತೇಕ ಭಿನ್ನವಾಗಿರುವ ಈ ಮಾರಕ ಕಾಯಿಲೆ.ಗುರುತಿಸಲು ಕಷ್ಟವಾಗುವಂತಹ ಹಾಗೂ ಚಿಕಿತ್ಸೆ ವಿಳಂಬವಾದಲ್ಲಿ ಪ್ರಾಣಕ್ಕೆ ಮಾರಕವಾಗುವ ಗಂಭೀರ ಕಾಯಿಲೆ.ಇದನ್ನು ಅಲೋಪಥಿ ಗುರುತಿಸುವುದಿಲ್ಲ.ಇದರಲ್ಲಿ ತ್ವಚೆ ಹಾಗೂ ಕಣ್ಣುಗಳು ವಿಪರೀತ ಬಿಳಿಯಾಗುತ್ತವೆ ಎಂದು ಹೇಳಲಾಗಿದೆ. ದೇಹಕ್ಕೆ ಸುಸ್ತು ಮತ್ತು ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತವೆ.

See also  ಮಂಗಳೂರು: ಸ್ನೇಹಮಯಿ ಕೃಷ್ಣ ವಿರುದ್ಧದ ವಾಮಾಚಾರ ಪ್ರಕರಣಕ್ಕೆ ಟ್ವಿಸ್ಟ್..! ಮಹಿಳಾ ಪೊಲೀಸ್ ಅಧಿಕಾರಿಯ ಕೈವಾಡ..!
  Ad Widget   Ad Widget   Ad Widget