ಕ್ರೈಂ

ನೋಡ ನೋಡುತ್ತಲೇ ಕೆರೆಗೆ ಧುಮುಕಿದ ಕಾರು..!ಅಷ್ಟಕ್ಕೂ ಘಟನೆ ಸಂಭವಿಸಿದ್ದೇಗೆ?ಮೂವರು ಪ್ರಯಾಣಿಕರಿಗೇನಾಯ್ತು?

246

ನ್ಯೂಸ್ ನಾಟೌಟ್ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಧುಮುಕಿದ ಘಟನೆ ಶನಿವಾರ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಮತ್ತು ಮಹಿಳೆಯರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಸೊನಲೆಗೆ ತೆರಳುತಿದ್ದ ಕಾರು ಹೊಸನಗರ ರಸ್ತೆಯಲ್ಲಿರುವ ತಾವರೆಕೆರೆಗೆ ಬಿದ್ದಿದೆ ಎಂದು ವರದಿಯಾಗಿದೆ.ಸಕಾಲಕ್ಕೆ ನೆರವಿಗೆ ಆಗಮಿಸಿದ ಸ್ಥಳಿಯರು ಸಹಕರಿಸಿ ಪ್ರಯಾಣಿಕರನ್ನು ಯಾವುದೇ ಅಪಾಯವಿಲ್ಲದೇ ಹೊರಕ್ಕೆ ತಂದಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ರಿಪ್ಪನಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

See also  ಮಹಾನಗರ ಪಾಲಿಕೆ ಆಯುಕ್ತರ ನಕಲಿ ಸಹಿ ಮಾಡಿ ಲಕ್ಷಾಂತರ ರೂ. ವಂಚನೆ..! 5 ಮಂದಿ ಅರೆಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget