Latestಕ್ರೈಂರಾಜ್ಯ

ಹೊಟೇಲ್‌ ಗೆ ಊಟಕ್ಕೆಂದು ತೆರಳಿದ್ದ ಯುವಕ, ಯುವತಿ;ಅಪರಿಚಿತರಿಂದ ವಿಡಿಯೋ ಚಿತ್ರೀಕರಣ,ಕಿಡ್ನಾಪ್‌ ಮಾಡಿ ಹಣಕ್ಕೆ ಡಿಮಾಂಡ್!!

649
Spread the love

ನ್ಯೂಸ್‌ ನಾಟೌಟ್‌ :ಏಕಾಏಕಿ ಅಪರಿಚಿತರ ತಂಡವೊಂದು ಹೊಟೇಲ್‌ ಗೆ ನುಗ್ಗಿ ಯುವಕ, ಯುವತಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆನ್ನುವ ಬಗೆಗಿನ ದೂರೊಂದು ಸಿವಮೊಗ್ಗದ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಯುವಕ ಮತ್ತು ಯುವತಿ ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್‌ ಒಂದಕ್ಕೆ ಬಂದಿದ್ದರು. ಈ ವೇಳೆ ಇಬ್ಬರು ಊಟಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಏನಿದು ಘಟನೆ?

ಊಟದ ಕೊಠಡಿಯಲ್ಲಿ ಯುವಕ ಬಿಯರ್‌ ಬಾಟಲಿ ಇಟ್ಟುಕೊಂಡು ಊಟ ಮಾಡುತ್ತಿದ್ದ.ಜತೆಗೆ ಹುಡುಗಿಯೂ ಊಟ ಮಾಡುತ್ತಿದ್ದಳು. ಆ ಸಂದರ್ಭ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಯುವಕ ಮತ್ತು ಯುವತಿಯನ್ನು ಬಲವಂತವಾಗಿ ಆಟೋದಲ್ಲಿ ಶಿವಮೊಗ್ಗಕ್ಕೆ ಕರೆತಂದು ವಿವಿಧೆಡೆ ಸುತ್ತಾಡಿಸಿ ಹಣ ಪೀಕಿಸಲು ಪ್ರಯತ್ನಿಸಿದ್ದಾರೆ.ಮಾತ್ರವಲ್ಲ ವಿಡಿಯೋ ಲೀಕ್‌ ಮಾಡುವುದಾಗಿ ಬೆದರಿಸಿದ್ದು, ಈ ವೇಳೆ ಯುವತಿ ಬಳಿ ಇದ್ದ 24 ಸಾವಿರ ರೂ., ಹಣ, ಯುವಕನ ಮೊಬೈಲ್‌ನಿಂದ ಗೂಗಲ್‌ ಪೇ ಮೂಲಕ 1500 ರೂ. ಹಣ ವರ್ಗಾಯಿಸಿಕೊಂಡಿದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯುವಕ ಮತ್ತು ಯುವತಿಯನ್ನು ಆಟೋದಲ್ಲಿ ಕರೆತಂದು ಎಂಆರ್‌ಎಸ್‌ ಸರ್ಕಲ್‌ ಬಳಿ ಬಿಟ್ಟು, ಅವರ ಬೈಕ್‌ ಕೊಟ್ಟು ಕಳುಹಿಸಲಾಗಿದೆ.ಇವಿಷ್ಟು ಮಾತ್ರವಲ್ಲದೇ ರಾತ್ರಿಯೊಳಗೆ ಒಂದೂವರೆ ಲಕ್ಷ ರೂ. ಹಣ ಕೊಡದೆ ಇದ್ದರೆ ವಿಡಿಯೋ ಲೀಕ್‌ ಮಾಡುವುದಾಗಿ ಬೆದರಿಕೆ ಒಡ್ಡಿದಾರೆ ಎಂದು ಆರೋಪಿಸಲಾಗಿದೆ.ಯುವಕನಿಗೆ ಕರೆ ಮಾಡಿದ್ದ ಅಪರಿಚಿತರು ಹಣ ತಂದು ಕೊಡುವಂತೆ ಬೆದರಿಸಿದ್ದರು. ಆರು ಸಾವಿರ ರೂ. ಹಣದೊಂದಿಗೆ ಯುವಕ ಶಿವಮೊಗ್ಗ ಬಸ್‌ ನಿಲ್ದಾಣದ ಬಳಿ ಬಂದಿದ್ದ. ಆಟೋದಲ್ಲಿ ಬಂದ ಯುವಕರಿಗೆ ಹಣ ಆರು ಸಾವಿರ ರೂ. ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಒಂದೂವರೆ ಲಕ್ಷ ರೂ. ಹಣ ನೀಡುವಂತೆ ಆಗ್ರಹಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಲಾಗಿದೆ.ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

See also  ಕೃಷಿಹೊಂಡಕ್ಕೆ ಬಿದ್ದು 2 ಪುಟ್ಟ ಬಾಲಕಿಯರು ಸಾವು..! ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ದುರ್ಘಟನೆ.!
  Ad Widget   Ad Widget   Ad Widget