ಕರಾವಳಿಸುಳ್ಯ

ಸಂಪಾಜೆಯಲ್ಲಿ ವಿಜೃಂಭಿಸಿದ ಶೌರ್ಯ ಜಾಗರಣಾ ರಥಯಾತ್ರೆ,ಹಿಂದೂ ಸಮಾಜದ ಒಗ್ಗಟ್ಟಿನ ಅನಿವಾರ್ಯತೆಯಿದೆ-ಹಿಂದೂ ನಾಯಕ ಅನಂತ್ ಊರುಬೈಲು

215

ನ್ಯೂಸ್ ನಾಟೌಟ್: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಆಯೋಜಿಸಿದ ಶೌರ್ಯ ಜಾಗರಣಾ ರಥಯಾತ್ರೆಯನ್ನು ಕೊಡಗಿನ ಗಡಿ ಸಂಪಾಜೆಯಲ್ಲಿ ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು.ಬಳಿಕ ದ.ಕ ಜಿಲ್ಲೆಗೆ ಕಳಿಸಿಕೊಡಲಾಯಿತು.

ಅಕ್ಟೋಬರ್ 6 ರಂದು ಮಡಿಕೇರಿಯಿಂದ ಆಗಮಿಸಿದ ರಥಯಾತ್ರೆಯನ್ನು ಸಂಜೆ 4 ಗಂಟೆಗೆ ಕೊಯನಾಡು ಶ್ರೀ ಮಹಾಗಣಪತಿ ಗುಡಿಯ ಬಳಿ ಸ್ವಾಗತಿಸಲಾಯಿತು.ಸಂಪಾಜೆ ,ಚೆಂಬು ಗ್ರಾಮದ ಹಿಂದೂ ಬಾಂಧವರ ಉಪಸ್ಥಿತಿಯಲ್ಲಿ ರಥಯಾತ್ರೆಗೆ ಅರ್ಚಕರು ಆರತಿ ಬೆಳಗಿದರು.ಬಳಿಕ ಸಂಪಾಜೆ ಪೆಟ್ರೋಲ್ ಬಂಕ್ ವರೆಗೆ ನೂರಾರು ವಾಹನಗಳ ಜಾಥಾದೊಂದಿಗೆ ರಥಯಾತ್ರೆಯನ್ನು ಕರೆತರಲಾಯಿತು.

ಈ ವೇಳೆ ನೆರೆದಿದ್ದ ಹಿಂದೂ ಸಮಾಜದ ಮುಖಂಡರು,ಮಾತೆಯರು,ಹಿಂದೂ ಪರಿವಾರದ ಕಾರ್ಯಕರ್ತರು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಿಂದೂ ನಾಯಕ ಅನಂತ್ ಊರುಬೈಲು ರಥಯಾತ್ರೆಯ ಉದ್ದೇಶ,ಮಹತ್ವದ ಬಗ್ಗೆ ಮಾತನಾಡುತ್ತಾ”ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಒಗ್ಗಟ್ಟಿನ ಅನಿವಾರ್ಯತೆ” ಬಗ್ಗೆ ವಿವರಿಸಿದರು. ಬಳಿಕ ಸಂಪಾಜೆ ಗೇಟಿನ ತನಕ ಕೇರಳದ ಚಂಡೆನಾದ ಜಯಘೋಷದೊಂದಿಗೆ ಪಾದಯಾತ್ರೆಯ ಮೂಲಕ ಆಗಮಿಸಿದರು.ಪಟಾಕಿ ಸಿಡಿಸಿ ,ದ.ಕ.ಜಿಲ್ಲೆಗೆ ರಥವನ್ನು ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಕೊಡಗು ವಿಹಿಂಪ ಅಧ್ಯಕ್ಷ ಶ್ರೀ.ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ,ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ,ಚಿ.ನಾ ಸೋಮೇಶ್,ಸುಬ್ರಹ್ಮಣ್ಯ ಉಪಾಧ್ಯಾಯ,ರಮಾದೇವಿ ಕಳಗಿ ಒಳಗೊಂಡಂತೆ ಐನೂರಕ್ಕೂ ಮೇಲ್ಪಟ್ಟು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.ಇಡೀ ಕಾರ್ಯಕ್ರಮದ ಯಶಸ್ಸಿಗೆ ಅನಂತ್ ರವರ ಉಸ್ತುವಾರಿಯಲ್ಲಿ ಉದಯ ಹನಿಯಡ್ಕ,ತಿಲಕ್ ರಾಜ್ ಕಳಗಿ,ಶಿವಪ್ರಸಾದ್,ಜಗದೀಶ್ ಸೇರಿದಂತೆ ಹತ್ತಾರು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

See also  ಬಂಟ್ವಾಳ: ಕಾರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕೊಡಗಿನ ವ್ಯಕ್ತಿ ಮೇಲೆ ಹಲ್ಲೆ..! ರಾತ್ರಿ ಹಣ - ಚಿನ್ನ ದೋಚಿ ಪರಾರಿ..!
  Ad Widget     Ad Widget   Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget