ಕರಾವಳಿ

ಮಂಗಳೂರು ಸ್ಫೋಟ ಪ್ರಕರಣ : ಆರೋಪಿ ಶಾರೀಕ್ ಗುರುತು ಪತ್ತೆ

ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಮೊಹಮ್ಮದ್ ಶಾರೀಕ್ ಕುಟುಂಬದ ವಿವರ ಪತ್ತೆಯಾಗಿದೆ. ಸ್ವತಃ ಕುಟುಂಬಸ್ಥರೇ ಇವನು ನಮ್ಮ ಕುಟುಂಬಕ್ಕೆ ಸೇರಿದವನು ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ.

ಇದಕ್ಕೂ ಮೊದಲು ತೀರ್ಥಹಳ್ಳಿಯಲ್ಲಿ ಆರೋಪಿ ಶಾರೀಕ್‌ ಹಾಗೂ ಆತನ ಸಂಬಂಧಿಕರ ನಿವಾಸಗಳ ಮೇಲೆ ನ.೨೧ ಸೋಮವಾರ ಬೆಳ್ಳಂ ಬೆಳಗ್ಗೆ ಪೊಲೀಸರು ದಾಳಿ ನಡೆಸಿದರು. ಮಂಗಳೂರಿನಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಕುಕ್ಕರ್ ನಲ್ಲಿ ಲಘು ಬಾಂಬ್ ಸ್ಫೋಟಿಸಿದ್ದಾನೆ ಎನ್ನುವ ಆರೋಪ ಶಾರೀಕ್‌ ಮೇಲಿದೆ .

ಈ ಹಿನ್ನಲೆಯಲ್ಲಿ ಆಗುಂಬೆ ಪಿಎಸ್ಐ ಶಿವಕುಮಾರ್, ಮಾಳೂರು ನವೀನ್ ಕುಮಾರ್ ಮಠಪತಿ ನೇತೃತ್ವದ ಪೊಲೀಸ್ ತಂಡವು ಸೋಮವಾರ ಬೆಳಗ್ಗೆ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಲಾಗಿದೆ. ೧೫ ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶಾರೀಕ್‌ ಮನೆಯಲ್ಲಿ ತಪಾಸಣೆ ನಡೆಸುವಾಗ ಪೊಲೀಸರಿಗೆ ಬಾಂಬ್ ಸ್ಫೋಟಿಸುವ ವಸ್ತುಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.

ಇದರಿಂದ ಈತ ಭಯೋತ್ಪಾದಕ ಅನ್ನುವುದು ಬಹಿರಂಗವಾಗುತ್ತಿದೆ. ಶಾರೀಕ್ ಮನೆಯಲ್ಲಿ ಸಲ್ಪೆಕ್ಸ್‌ ಸಲ್ಪರ್ ಪೌಡರ್‌, ನೆಟ್ ಬೋಲ್ಟ್‌ ಗಳು, ಸರ್ಕ್ಯೂಟ್ ಗಳು, ಮಲ್ಟಿ ಫಂಕ್ಷನ್‌ ಡಿಲೆ ಮಿಕ್ಸರ್‌, ಮ್ಯಾಚ್ ಬಾಕ್ಸ್‌, ಬ್ಯಾಟರಿ, ಮೆಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಅಲ್ಯುಮಿನಿಯಂ ಫೈಲ್‌, ಮೊಬೈಲ್ ಡಿಪ್ಲೆ ಸೇರಿದಂತೆ ಸ್ಫೋಟಕಕ್ಕೆ ಬಳಸುವ ಹಲವು ವಸ್ತುಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.

Related posts

ವಿಟ್ಲ : ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಲಾರಿ! ಸ್ಪಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ!

ಬೆಳ್ಳಾರೆಯ ಕೊಡಿಯಾಲದಲ್ಲಿ ಫೆಬ್ರವರಿ 10ರಂದು ಒತ್ತೆಕೋಲ, ಧರ್ಮದೈವ ವರ್ಣಾರ ಪಂಜುರ್ಲಿ, ಚಾಮುಂಡಿ, ಗುಳಿಗ ಮತ್ತು ಕಲ್ಲುರ್ಟಿ ದೈವಗಳಿಗೆ ಕೋಲ

ಮೋಂಟಡ್ಕದಲ್ಲಿ ತೋಟದ ಕೆರೆಗೆ ಬಿದ್ದ ಕಾಡುಕೋಣ