ಕರಾವಳಿದೈವಾರಾಧನೆಮಂಗಳೂರುವೈರಲ್ ನ್ಯೂಸ್

ಮಂಗಳೂರು: ಶರಾವು ಗುಳಿಗನ ಕೋಪಕ್ಕೆ ತುತ್ತಾದ ‘ಹಂಪನಕಟ್ಟೆ ಸ್ಮಾರ್ಟ್ ಸಿಟಿ’..!, ಮೂರು ವರ್ಷದ ಹಿಂದೆ 70 ಕೋಟಿ ಮಂಜೂರಾಗಿದ್ದರೂ ಕಾಮಗಾರಿ ಮುಗಿಸಲು ಒದ್ದಾಟ..! ಅಷ್ಟಕ್ಕೂ ಕಾಂಟ್ರಾಕ್ಟರ್ ಮಾಡಿದ ಆ ತಪ್ಪೇನು..?

251

ನ್ಯೂಸ್ ನಾಟೌಟ್: ಕರಾವಳಿಯ ಜನರಿಗೆ ದೈವ ದೇವರ ಕಂಡರೆ ಅದೇನೋ ಭಯ-ಭಕ್ತಿ. ಯಾವುದೇ ಕೆಲಸ ಮಾಡುವ ಮೊದಲು ದೈವದ ಮೊರೆ ಹೋಗುವುದು ಇಲ್ಲಿನ ಜನರ ವಾಡಿಕೆ. ಆದರೆ ಇಲ್ಲೊಬ್ಬ ದೈವದ ಮೊರೆ ಹೋಗದೆ ತನ್ನ ಪಾಡಿಗೆ ತಾನು ಕೆಲಸ ಮಾಡಲು ಹೋಗಿ ಈಗ ಸಂಕಷ್ಟಕ್ಕೆ ತುತ್ತಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ವರದಿಯಾಗಿದೆ.

ಕೆಲಸ ಆರಂಭಿಸುವ ಮೊದಲು ತನ್ನ ಬಳಿ ಬರುವಂತೆ ದೈವ ಹೇಳಿದರೂ ದೈವದ ಮಾತನ್ನು ದಿಕ್ಕರಿಸಿ ಕೆಲಸ ಆರಂಭಿಸಿದ್ದಾನೆ. ಯೋಜನೆ ಪೂರ್ಣಗೊಳಿಸುವಷ್ಟು ಹಣ ವ್ಯಕ್ತಿ ಬಳಿ ಇದ್ದರೂ ಕೆಲಸವನ್ನು ಪೂರ್ಣಗೊಳಿಸಲಾಗದೆ ಒದ್ದಾಟ ನಡೆಸುತ್ತಿದ್ದಾನೆ. ಇದೀಗ ಆತ ಅನಾರೋಗ್ಯಕ್ಕೂ ತುತ್ತಾಗಿದ್ದಾನೆ ಎಂದು ತಿಳಿದು ಬಂದಿದೆ.

ಹಂಪನ ಕಟ್ಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 800 ಕಾರುಗಳು ಪಾರ್ಕ್ ಮಾಡಬಹುದಾಗ ಬೃಹತ್ ಕಾರ್ ಪಾರ್ಕಿಂಗ್ ನಿರ್ಮಾಣ ಹಂತದ ಕಾಮಗಾರಿ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿದೆ. ಈ ಯೋಜನೆಗೆ ಅಗತ್ಯವಾಗಿದ್ದ ಸುಮಾರು 70 ಕೋಟಿ ರೂ. ಅನುದಾನವೂ ಬಿಡುಗಡೆಗೊಂಡಿದೆ. ಹಾಗಿದ್ದರೂ ಇಲ್ಲಿ ಇದುವರೆಗೆ ಶೇ. 10 ರಷ್ಟು ಕೆಲಸವೂ ಆಗಿಲ್ಲ. ಇಷ್ಟು ದಿನಗಳಲ್ಲಿ ಕೆಲಸ ನಿಧಾನವಾಗುವುದಕ್ಕೆ ಕಾರಣ ಏನು..? ಅನ್ನುವುದರ ಬಗೆಗಿನ ಕಥೆಯೇ ರೋಚಕವಾಗಿದೆ.

ಈ ಸ್ಟಾರ್ಟ್ ಸಿಟಿ ಪ್ರಾಜೆಕ್ಟ್ ಆರಂಭವಾಗಿರುವ ಸಮೀಪದಲ್ಲೇ ಶರಾವು ಗುಳಿಗನ ಸ್ಥಳ ಸ್ಥಾನಿಧ್ಯವಿದೆ. ಈ ಯೋಜನೆಯ ಆರಂಭವಾಗುವುದಕ್ಕೂ ಮೊದಲು ಯೋಜನೆಗೆ ಸಂಬಂಧಪಟ್ಟಂತೆ ದೈವದ ಅಭಯ ನುಡಿ ಕೇಳಲು ಕೆಲವರು ಹೋಗಿದ್ದರು. ಆದರೆ ಈ ಯೋಜನೆಯ ಕಾಂಟ್ರಾಕ್ಟರ್ ಮಾತ್ರ ದೈವದ ಬಳಿ ಹೋಗಿರಲಿಲ್ಲ. ದೈವದ ಬಳಿ ಹೋಗುತ್ತಿದ್ದಂತೆ ದೈವ.. ‘ಕಾಂಟ್ರಾಕ್ಟರ್ ಎಲ್ಲಿ,..? ಅವನನ್ನು ಸಾನಿಧ್ಯಕ್ಕೆ ಕರೆದುಕೊಂಡು ಬನ್ನಿ, ಇದು ಅವನ ಲೆಕ್ಕ, ನನ್ನ ಲೆಕ್ಕ ನನ್ನ ಹತ್ತಿರ ಇದೆ, ನನ್ನ ಮಾತು ದಿಕ್ಕರಿಸಿ ನಡೆದರೆ ಯೋಜನೆ ಪೂರ್ಣಗೊಳ್ಳುವುದಿಲ್ಲ’ ಎಂದು ಗುಳಿಗ ದೈವ ಎಚ್ಚರಿಸಿತ್ತು.

ದೈವ ಹೇಳಿದ ಮಾತನ್ನು ಸ್ಥಳೀಯರು ಕಾಂಟ್ರಾಕ್ಟರ್ ಬಳಿ ಹೇಳಿದ್ದಾರೆ. ಆದರೆ ಕಾಂಟ್ರಾಕ್ಟರ್ ಇದಕ್ಕೆಲ್ಲ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ಅವನ ಪಾಡಿಗೆ ಅವ ಕೆಲಸ ಆರಂಭಿಸುತ್ತಾನೆ. ಆದರೆ ಆರಂಭಿಸಿದ ಕೆಲಸ ಒಂದು ಕೂಡ ಕೈಗೂಡುವುದಿಲ್ಲ. ಹಲವಾರು ವಿಘ್ನಗಳು ಆರಂಭದಿಂದಲೂ ಬರುತ್ತಲೇ ಇತ್ತು. ಇತ್ತೀಚೆಗೆ ಐದು ತಿಂಗಳ ಹಿಂದೆಯಂತೂ ಇಡೀ ತಡೆಗೋಡೆಯೇ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಅದಾದ ಬಳಿಕ ಕಾಂಟ್ರಾಕ್ಟರ್ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಹೀಗಾಗಿ ಕಾಮಗಾರಿ ಇದೀಗ ಸಂಪೂರ್ಣ ನಿಂತಿದೆ. ದೈವ ಹೇಳಿದ ಮಾತನ್ನು ಕೇಳದ್ದಕ್ಕೆ ಇದೆಲ್ಲ ಆಗುತ್ತಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವವು ನೀನು ಕೋರ್ಟ್ ಗೆ ಹೋಗ್ತಿ….ನಿನ್ನ ತೀರ್ಮಾನವನ್ನು ಮೆಟ್ಟಿಲಲ್ಲಿ ನಾನು ಮಾಡುತ್ತೇನೆ’ ಎಂದು ಹೇಳಿದ ಡೈಲಾಗ್ ಅನ್ನು ಈ ಘಟನೆ ನೆನಪಿಸುತ್ತಿರುವುದು ವಿಶೇಷ.

See also  ಬಡವರ ಜನ್‌ಧನ್‌ ಖಾತೆಗೂ ಹ್ಯಾಕರ್ಸ್ ಭಯ..! 52 ಕೋಟಿ ಜನರ ಖಾತೆಯ ಬಗ್ಗೆ ಸಂಶೋಧನೆಯಿಂದ ಬಯಲಾದದ್ದೇನು..?

ಒಟ್ಟಿನಲ್ಲಿ ದೈವ ದೇವರನ್ನು ನಂಬದಂತಹ ಜನರಿಗೆ ಇಲ್ಲಿನ ದೈವಗಳು ಕಾಲಕಾಲಕ್ಕೆ ತಮ್ಮದೇ ಆದ ರೀತಿಯಲ್ಲಿ ಎಚ್ಚರಿಸುತ್ತಿವೆ. ಮಾತ್ರವಲ್ಲ ಧರ್ಮದ ಮಾರ್ಗದಲ್ಲಿ ನಡೆಯುವಂತೆ ಸೂಚಿಸುತ್ತಿವೆ. ಧರ್ಮ ಮರೆತು ಅಧರ್ಮದ ದಾರಿಯಲ್ಲಿ ನಡೆದಾಗ ದೈವಗಳ ಶಿಕ್ಷೆಯಿಂದ ಪಾರಾಗೋದು ಕಷ್ಟ. ಇದು ತುಳುನಾಡಿನ ದೈವ ದೇವರ ‘ಪವರ್’ ಎನ್ನಬಹುದು.

Click 👇

https://newsnotout.com/2024/06/kannada-news-bengaluru-karim-nagara-video-call-police-issue
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget