ದಕ್ಷಿಣ ಕನ್ನಡಶಿಕ್ಷಣಸುಳ್ಯ

ಸುಳ್ಯ: ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿಗಳ ದಾಖಲಾತಿ ಆರಂಭ, ಆಸಕ್ತರು ಈ ಕೂಡಲೇ ಸಂಪರ್ಕಿಸಿ

162

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ (ರಿ) ಸುಳ್ಯ ಪ್ರಾಯೋಜಿತ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ದ.ಕ 2024-25 ನೇ ಸಾಲಿನ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ.

ಕಲಾ ವಿಭಾಗ, ವಾಣಿಜ್ಯ ವಿಭಾಗ, ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಗುಣಮಟ್ಟದ ಶೈಕ್ಷಣಿಕ ತರಬೇತಿ ಲಭ್ಯವಿದೆ. ಹುಡುಗರಿಗೂ ದಾಖಲಾತಿಗೆ ಅವಕಾಶವಿದೆ. ಆಸಕ್ತರು ಈ ಕೂಡಲೇ ಸಂಪರ್ಕಿಸಿ ಎಂದು ಪ್ರಾಂಶುಪಾಲರು/ ಸಿಬ್ಬಂದಿ ವರ್ಗ ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜು ಸುಳ್ಯ ಹಾಗೂ ಅಧ್ಯಕ್ಷರು/ಸರ್ವ ಸದಸ್ಯರು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ (ರಿ) ಸುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊ: 9481212588

ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜು ಸುಮಾರು ವರ್ಷಗಳಿಂದ ಸತತವಾಗಿ ಶೇಕಡಾ ನೂರು ಫಲಿತಾಂಶ ಪಡೆಯುತ್ತ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಕಲಾ, ವಿಜ್ಞಾನ ವಾಣಿಜ್ಯ ವಿಭಾಗಗಳನ್ನು ಹೊಂದಿದ್ದು, ಸುಳ್ಯ ತಾಲೂಕು ಹಾಗೂ ನೆರೆಯ ತಾಲೂಕಿನ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸುವ ಆಶಾಕಿರಣವಾಗಿದೆ. ಶೈಕ್ಷಣಿಕವಲ್ಲದೆ ಕ್ರೀಡೆ, ಸಾಂಸ್ಕೃತಿಕ ರಂಗದಲ್ಲೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ರಂಗಸ್ಥಳದಂತಿದೆ. ಮಹಿಳಾ ಕಾಲೇಜು ಎಂದೇ ಪ್ರಖ್ಯಾತಿ ಪಡೆದಿದ್ದ ಸಂಸ್ಥೆ ಇದೀಗ ಪ್ರಸಕ್ತ ಸಾಲಿನಿಂದ ಹುಡುಗರಿಗೂ ಶಿಕ್ಷಣ ಪಡೆಯುವ ಉತ್ತಮ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.

See also  ಅಜ್ಜಾವರ: ರಸ್ತೆಯಲ್ಲೆಲ್ಲ ಪುಟ್ಟ ಹೆಜ್ಜೆಯಿಟ್ಟುಕೊಂಡು ಓಡಾಡುತ್ತಿರುವ ಮರಿ ಆನೆ, ತಾಯಿ ಇಲ್ಲದ ತಬ್ಬಲಿಗೆ ಈಗ ಮನುಷ್ಯನೇ ಅಪ್ಪ-ಅಮ್ಮ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget