Latestಜೀವನಶೈಲಿವೈರಲ್ ನ್ಯೂಸ್

ಚೀನಾದ ಈ ರೆಸ್ಟೋರೆಂಟ್ ನಲ್ಲಿ ಆನೆ ಲದ್ದಿಯಿಂದ ತಯಾರಾಗುತ್ತೆ ಲಡ್ಡು!!ಇದನ್ನು ತಿನ್ನಲೆಂದೇ ಕುಟುಂಬಸಮೇತರಾಗಿ ಜನ ಬರ್ತಾರೆ!!

639
Spread the love

ನ್ಯೂಸ್‌ ನಾಟೌಟ್:ಜಿರಲೆ, ಹಾವು, ನಾಯಿ ಯಾವ್ದನ್ನೂ ಬಿಡದ ಚೀನಾ ವಿಚಿತ್ರ ಅಡುಗೆಯಲ್ಲಿ ಮೇಲುಗೈ ಸಾಧಿಸಿದೆ. ಈಗ ಚೀನಾದ ಇನ್ನೊಂದು ರೆಸ್ಟೋರೆಂಟ್ ಸುದ್ಧಿಯಲ್ಲಿದೆ.ಹೌದು, ಶಾಂಘೈ ನಗರದಲ್ಲಿರುವ ಕ್ಯಾನೋಪಿಯಾ ಎಂಬ ರೆಸ್ಟೋರೆಂಟ್ ಪರಿಸರ ಸ್ನೇಹಿ ರೆಸ್ಟೋರೆಂಟ್ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಆನೆ ಸಗಣಿಯಿಂದ ಲಡ್ಡು ಮಾಡಿ ಸರ್ವ್ ಮಾಡಲಾಗುತ್ತದೆ ಅಂದ್ರೆ ನೀವು ನಂಬಲೇ ಬೇಕು..!

ಮರದ ಎಲೆಗಳು, ಜೇನುತುಪ್ಪ ಲೇಪಿತ ಐಸ್ ಕ್ಯೂಬ್ಗಳು, ರಾಫ್ಲೆಸಿಯಾ ಹೂವುಗಳು ಮತ್ತು ಒಣಗಿದ ಆನೆಯ ಸಗಣಿಯಿಂದ ಸಿಹಿತಿಂಡಿಗಳನ್ನು ಈ ರೆಸ್ಟೋರೆಂಟ್ ತಯಾರಿಸುತ್ತದೆ.  ಆನೆ ಲದ್ದಿಯ ಲಡ್ಡು ಮಾತ್ರವಲ್ಲ ರೆಸ್ಟೋರೆಂಟ್ ನಲ್ಲಿ ಇನ್ನೂ 14 ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ 14 ಖಾದ್ಯಗಳ ಥಾಲಿ, ರೆಸ್ಟೋರೆಂಟ್ ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಥಾಲಿಯ ಬೆಲೆ 3,888 ಯುವಾನ್ ಅಂದ್ರೆ ಸರಿಸುಮಾರು 47,000 ರೂಪಾಯಿ. ಈ ಥಾಲಿ ತಿನ್ನಲು ಜನರು ತಮ್ಮ ಇಡೀ ಕುಟುಂಬದೊಂದಿಗೆ ಇಲ್ಲಿಗೆ ಬರ್ತಾರೆ. ರೆಸ್ಟೋರೆಂಟ್ ಮುಂದೆ ದೊಡ್ಡ ಕ್ಯೂವನ್ನು ಕಾಣ್ಬಹುದು.

ಇಲ್ಲಿನ ವಿಶೇಷತೆ ಏನು?

ಇದೊಂದು ವಿಶೇಷ ರೀತಿಯ ರೆಸ್ಟೋರೆಂಟ್ ಆಗಿದ್ದು, ಚೀನಾದ ಬ್ಲಾಂಗ್ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಈ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಫ್ರಾನ್ಸ್ನ ಅಡುಗೆಯವರು ಇಲ್ಲಿ ಕೆಲ್ಸ ಮಾಡ್ತಿದ್ದು,ಆನೆ ಲದ್ದಿಯನ್ನು ಸಂಗ್ರಹಿಸಿ, ಅದನ್ನು ಚೆನ್ನಾಗಿ ಒಣಗಿಸುತ್ತಾರೆ. ಲದ್ದಿಯಲ್ಲಿರುವ ಸೂಕ್ಷ್ಮಜೀವಿಗಳನ್ನು ಸಾಯಿಸಿ ನಂತ್ರ ಲಡ್ಡನ್ನು ತಯಾರಿಸಲಾಗುತ್ತದೆ. ಲದ್ದಿಯನ್ನು ಪುಡಿ ಮಾಡಿ ಖಾದ್ಯ ತಯಾರಿಸಲಾಗುತ್ತದೆ. ಆನೆಯ ಸಗಣಿಯಿಂದ ತಯಾರಿಸಿದ ಲಡ್ಡು  ತುಂಬಾ ರುಚಿಕರ ಎನ್ನಲಾಗುತ್ತದೆ. ಆನೆಯ ಸಗಣಿ ಜೊತೆಗೆ  ಕ್ಯಾನೋಪಿಯಾ ರೆಸ್ಟೋರೆಂಟ್ ಅನೇಕ ಸಿಹಿತಿಂಡಿಗಳನ್ನು ತಯಾರಿಸುತ್ತದೆ. ಅದಕ್ಕೆ ಗಿಡಮೂಲಿಕೆಗಳ ಸುಗಂಧ ದ್ರವ್ಯಗಳು, ಹಣ್ಣಿನ ಜಾಮ್ಗಳು, ಪರಾಗ ಮತ್ತು ಜೇನು ತುಪ್ಪದ ಶರಬತ್ತುಗಳನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ.  

ಹೇಗಿದೆ ಊಟ?

ಆಹಾರದ ಬ್ಲಾಗರ್ ಒಬ್ಬರು ಈ ವೀಡಿಯೊ ಹಂಚಿಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರೆಸ್ಟೋರೆಂಟ್ ನ ಸ್ಥಾಪಕರು ಯುನ್ನಾನ್ ಪ್ರಾಂತ್ಯದ ಮಳೆಕಾಡಿನಲ್ಲಿ ಸುಮಾರು 7 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದರು. ಈ ಸಂಶೋಧನೆಯ ಆಧಾರದ ಮೇಲೆ, ರೆಸ್ಟೋರೆಂಟ್ಗಾಗಿ ಭಕ್ಷ್ಯಗಳನ್ನು ತಯಾರಿಸಿದ್ದಾರೆ.

ಇಲ್ಲಿ ಊಟದ ಆರಂಭದಲ್ಲಿ, ಬ್ಲಾಗರ್ಗೆ ಶಾಸ್ತ್ರೋಕ್ತವಾಗಿ ಮಡಕೆಯಲ್ಲಿ ಇಟ್ಟ ಗಿಡದಿಂದ ಕಿತ್ತು ತೆಗೆದ ಎಲೆಯನ್ನು ಸಾಸ್ನಲ್ಲಿ ಅದ್ದಿ ಹಸಿಯಾಗಿ ತಿನ್ನಲು ನೀಡಲಾಗುತ್ತದೆ. ಇದಾದ ನಂತ್ರ ಅನೇಕ ವಿಚಿತ್ರ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಬಳಿಕ ಜೇನುತುಪ್ಪವನ್ನು ನೆಕ್ಕಲು ಐಸ್ ಕ್ಯೂಬ್ ನೀಡಲಾಗಿತ್ತು. ನಂತ್ರ ಆನೆ ಲದ್ದಿಯಿಂದ ಮಾಡಿದ ಲಡ್ಡು ಸೇರಿದಂತೆ ದುರ್ವಾಸನೆ ಬರುವ ಆಹಾರವನ್ನೂ ಸರ್ವ್ ಮಾಡಲಾಯ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಜನರು ಅನೇಕ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅಸಹ್ಯಕರ ಮತ್ತು ಭಯಾನಕ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

  Ad Widget   Ad Widget   Ad Widget   Ad Widget   Ad Widget   Ad Widget