ನ್ಯೂಸ್ ನಾಟೌಟ್: ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದು ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಭಾಗ್ಯವನ್ನು ಕಲ್ಪಿಸಿದ್ದಾರೆ. ಈ ಯೋಜನೆ ಇಡೀ ರಾಜ್ಯಕ್ಕೆ ಖುಷಿಯನ್ನು ಕೊಟ್ಟರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಹಿಳೆಯರಿಗೆ ಪ್ರಯೋಜನಕ್ಕೆ ಸಿಗುತ್ತಿಲ್ಲ ಎಂದು ಸ್ವತಃ ಜನರೇ ಹೇಳಿಕೊಳ್ಳುತ್ತಿದ್ದು ತಕ್ಷಣ ಎರಡೂ ಜಿಲ್ಲೆಗಳಿಗೆ ಸರಕಾರಿ ಬಸ್ ಗಳ ಓಡಾಟವನ್ನು ಆರಂಭಿಸಬೇಕು ಒತ್ತಾಯ ಹೆಚ್ಚಾಗಿದ್ದು ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ಬಸ್ ದರ್ಬಾರ್
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ಖಾಸಗಿ ಬಸ್ ಗಳ ದರ್ಬಾರ್ ನಡೆಯುತ್ತಿದೆ. ಮಂಗಳೂರಿನಲ್ಲಿ ಹಾಗೂ ಉಡುಪಿಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸರಕಾರಿ ಬಸ್ಗಳಿವೆ. ಇದೀಗ ಶಕ್ತಿಯೋಜನೆ ಜಾರಿ ಘೋಷಣೆಯಾಗುತ್ತಿದ್ದಂತೆ ಸರಕಾರಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ವಿವಿಧ ವರ್ಗದ ಜನರಿಂದ ಒತ್ತಾಯ ಕೇಳಿ ಬರುತ್ತಿದೆ. ಇದೀಗ ರಾಜಕೀಯ ಪಕ್ಷದ ನಾಯಕರೂ ಕೂಡ ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಿಸಬೇಕು ಅನ್ನುವಂತಹ ಒತ್ತಾವನ್ನು ಮಾಡುತ್ತಿದ್ದಾರೆ.
ಖಾಸಗಿ ಬಸ್ ಗೆ ಬ್ರೇಕ್ ?
ಸರಕಾರಿ ಉಚಿತ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದರೆ ಖಾಸಗಿ ಬಸ್ ನ ಮಾಲೀಕರಿಗೆ ದೊಡ್ಡ ಹೊಡೆತ ಬೀಳುವುದಂತೂ ಗ್ಯಾರಂಟಿ. ಸರಕಾರ ಲಾಭಿಗಳಿಗೆ ಮಣಿಯದೇ ದಿಟ್ಟ ತೀರ್ಮಾನವನ್ನು ತೆಗೆದುಕೊಳ್ಳುವುದೇ ಅನ್ನುವುದನ್ನು ಕಾದು ನೋಡಬೇಕಿದೆ.
ಉಡುಪಿ ಜಿಲ್ಲೆಗಳಿಗೂ ಬಸ್ ಗಳಿಲ್ಲ
ಉಡುಪಿ ಜಿಲ್ಲೆಯ ಕಾರ್ಕಳದಿಂದ ಸಾಣೂರು, ಮುರತ್ತಂಗಡಿ, ಬೆಳುವಾಯಿ-ಅಲಂಗಾರು, ಮೂಡಬಿದಿರೆ, ಕಾಂತಾವರ, ಧೂಪದ ಕಟ್ಟೆ, ಬೆಳ್ಮಣ್ , ನಂದಳಿಕೆ, ಸೂಡ, ಪಿಲಾರಖಾನ್, ಮಂಚಕಲ್, ಹಿರ್ಗಾನ, ಎಣ್ಣೆ ಹೊಳೆ, ಅಜೆಕಾರು, ಹೆಬ್ರಿ, ಸೋಮೇಶ್ವರ, ಅಂಡಾರು, ಅಜೆಕಾರು, ಶಿರ್ಲಾಲು, ಕೆರ್ವಾಶೆ, ಜೋಡು ಕಟ್ಟೆ, ರಂಜಾಳ, ಇರ್ವತ್ತೂರು, ಮಿಯಾರು, ಬಜಗೋಳಿ, ಮಾಳ, ನೆಲ್ಲಿಕಾರು, ಹೊಸ್ಮಾರು, ನಾರಾವಿ, ತೆಳ್ಳಾರು, ದುರ್ಗಾ, ನಕ್ರೆ, ನಿಂಜೂರು, ಪಳ್ಳಿ, ಕಣಜಾರು, ಭಾಗಗಳಿಗೆ ಕೆಎಸ್ ಆರ್ ಟಿಸಿ ಬಸ್ ಗಳೇ ಇಲ್ಲ. ಇಲ್ಲಿನ ಜನರು ನಿತ್ಯ ಖಾಸಗಿ ಬಸ್ ಗಳನ್ನೇ ಅವಲಂಭಿಸಬೇಕಿದೆ.