ಕಾಸರಗೋಡುದೇಶ-ವಿದೇಶರಾಜಕೀಯರಾಜ್ಯವೈರಲ್ ನ್ಯೂಸ್

ಇನ್ನು ಮುಂದೆ ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನದಲ್ಲಿಇರುಮುಡಿ’ ಸಾಗಿಸಲು ಅನುಮತಿ..! ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಹೇಳಿದ್ದೇನು..?

ನ್ಯೂಸ್ ನಾಟೌಟ್: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಯಾತ್ರಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ ನಲ್ಲಿ ಇನ್ನು ಮುಂದೆ ಇರುಮುಡಿ’ಯನ್ನು ಸಾಗಿಸಲು ಅನುಮತಿ ಇದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.

ಶನಿವಾರ(ಅ.27) ಮಾಹಿತಿ ಹಂಚಿಕೊಂಡ ಸಚಿವ, “ನವೆಂಬರ್ ಮಧ್ಯದಿಂದ ಜನವರಿಯ ಕೊನೆಯವರೆಗೆ ಶಬರಿಮಲೆಗೆ ಯಾತ್ರಾರ್ಥಿಗಳು ತೆರಳುತ್ತಾರೆ. 2025ರ ಜನವರಿ 20ರವರೆಗೆ ಯತಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ ನಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಪ್ರಯಾಣಿಸಬಹುದು ಹಾಗೂ ಈ ಸೀಮಿತ ಅವಧಿಯಲ್ಲಿ ಮಾತ್ರ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ” ಎಂದು ತಿಳಿಸಿದ್ದಾರೆ.

ಸದ್ಯದ ನಿಯಮಗಳ ಪ್ರಕಾರ ವಿಮಾನಗಳ ಕ್ಯಾಬಿನ್ ಬ್ಯಾಗ್‌ ನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಶಬರಿಮಲೆಗೆ ಹೋಗುವವರಿಗೆ ಯಾತ್ರೆ ಸುಲಭವಾಗಿರಲಿ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ `ಇರುಮುಡಿ’ಯಲ್ಲಿ (ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಇತರ ಪೂಜಾ ಸಾಮಗ್ರಿಗಳನ್ನು ಹೊಂದಿದ ಗಂಟು) ತೆಂಗಿನಕಾಯಿಯನ್ನು ಸಾಗಿಸಲು ವಿನಾಯಿತಿ ನೀಡಲಾಗಿದೆ” ಎಂದು ಹೇಳಿದ್ದಾರೆ.

ಈ ಆದೇಶವು 2025ರ ಜನವರಿ 20ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅಗತ್ಯವಿರುವ ಎಕ್ಸ್-ರೇ, ಇಟಿಡಿ ಮತ್ತು ಭೌತಿಕ ತಪಾಸಣೆ ಹೀಗೆ ಭದ್ರತಾ ತಪಾಸಣೆಗಳ ಬಳಿಕವೇ ಅನುಮತಿ ನೀಡಲಾಗುವುದು ಎಂದಿದ್ದಾರೆ.

Click

https://newsnotout.com/2024/10/kannnada-news-viral-news-railway-issue-social-media-collision/
https://newsnotout.com/2024/10/kannada-news-kodagu-and-hyderabad-link-in-case-kannada-news-d-kushalnagara/
https://newsnotout.com/2024/10/4-month-later-ekta-gupta-and-gym-traner-case-revealed/
https://newsnotout.com/2024/10/railway-kannada-news-viral-news-bandra-railway-station-mumbai/
https://newsnotout.com/2024/10/belekeri-mining-issue-7-year-jail-mla-sathish-sail-kannada-news-s/
https://newsnotout.com/2024/10/selfy-kannada-news-elephant-kannada-news-elephant/
https://newsnotout.com/2024/10/udupi-railway-box-sakaleshpura-man-nomnore-kannada-news/

Related posts

ಇಂದು(ಎ.20) ಮತ್ತೆ ಮೋದಿ ಕರ್ನಾಟಕಕ್ಕೆ ಆಗಮನ, 50 ಸಾವಿರ ಆಸನಗಳ ವ್ಯವಸ್ಥೆ, 450 ಪೊಲೀಸರಿಂದ ಬಂದೋಬಸ್ತ್

ನೀವು ಹಾವು ಆಕಳಿಸುವುದನ್ನು ಎಂದಾದರೂ ಕಂಡಿದ್ದೀರಾ?ಇಲ್ಲಿದೆ ವಿಡಿಯೋ…

ಇಸ್ರೇಲ್ ಮೇಲೆ ತೀವ್ರಗೊಂಡ ಇರಾನ್‌ ದಾಳಿ..! ಇರಾನ್ ಗೆ ಕರೆ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, 17 ಭಾರತೀಯರು ಹಡಗಿನೊಳಗೆ ಬಂಧಿ..!