ಕ್ರೈಂವೈರಲ್ ನ್ಯೂಸ್

ಶಬರಿಮಲೆ ದೇವಸ್ಥಾನಕ್ಕೆ ಕೋರ್ಟ್ ನೀಡಿದ ಎಚ್ಚರಿಕೆ ಏನು? ವಕೀಲರ ತಂಡವನ್ನು ಶಬರಿಮಲೆಗೆ ಕಳುಹಿಸಲು ಹೈಕೋರ್ಟ್ ತೀರ್ಮಾನಿಸಿದ್ದೇಕೆ?

231

ನ್ಯೂಸ್ ನಾಟೌಟ್: ಶಬರಿಮಲೆಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಹೈಕೋರ್ಟ್​ ಆದೇಶ ನೀಡಿದ್ದು, ಈ ಹಿಂದೆ ಶಬರಿಮಲೆಯಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಅನಾಹುತಗಳಾಗಿತ್ತು ಈ ಬಗ್ಗೆ ಎಡಿಜಿಪಿ ಮಂಗಳವಾರದಂದು ಹೈಕೋರ್ಟ್​ನಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಇಬ್ಬರು ವಕೀಲರು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಿದ್ದರು. ಈ ವೇಳೆ, ಅಲ್ಲಿನ ಅವ್ಯವಸ್ಥೆಯನ್ನು ಕಂಡು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ ದೇವಾಲಯದಲ್ಲಿ ಒದಗಿಸಲಾಗಿಲ್ಲ. ಜೊತೆಗೆ ಇಲ್ಲಿನ ವಿಶ್ರಾಂತಿ ಗೃಹಗಳಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ಅಲ್ಲದೇ ಇಲ್ಲಿನ ದೇವರ ದರ್ಶನಕ್ಕೆ ಹೋಗುವ ಸರತಿ ಸಾಲು ಪದ್ಧತಿ ಸರಿಯಿಲ್ಲ ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್​, ಶಬರಿಮಲೆಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಮತ್ತು ಸರತಿ ಸಾಲಿನಲ್ಲಿ ಉಂಟಾಗುವ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸುವಂತೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಶಬರಿಮಲೆಯಲ್ಲಿ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಉಂಟಾದರೆ, ಭಕ್ತಾದಿಗಳಿಗೆ ಬೇಕಾದ ಸೂಕ್ತ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಹೈಕೋರ್ಟ್​ ಹೇಳಿದೆ ಎನ್ನಲಾಗಿದೆ.

ಪ್ರಕರಣ ಸಂಬಂಧ ವಕೀಲರ ತಂಡವನ್ನು ಶಬರಿಮಲೆಗೆ ಕಳುಹಿಸಲು ಹೈಕೋರ್ಟ್​ ಅಂತಿಮ ತೀರ್ಮಾನ ಕೈಗೊಳ್ಳದಿದ್ದರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಶಬರಿಮಲೆ ಭೇಟಿ ವೇಳೆ ಅಯ್ಯಪ್ಪ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲನೆ ನಡೆಸಲು ವಕೀಲರ ತಂಡವನ್ನು ನೇಮಿಸಲು ಹೈಕೋರ್ಟ್​ ಚಿಂತಿಸಿದ್ದರೂ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.

https://newsnotout.com/2023/12/darshan-dog-case-and-police/
https://newsnotout.com/2023/12/ayyappa-maladari-news-kannanews/
See also  ಬಸದಿಯಿಂದ ಜೈನ ಮುನಿ ನಿಗೂಢ ನಾಪತ್ತೆ..! ಈ ನಾಪತ್ತೆಯ ಬಗ್ಗೆ ಭಕ್ತರು ಹೇಳಿದ್ದೇನು?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget