ಕಾಸರಗೋಡುಕ್ರೈಂ

ಶಬರಿಮಲೆಗೆ ತೆರಳಿದ್ದ ಮಂಗಳೂರಿನ ವ್ಯಕ್ತಿ ಸ್ನಾನ ಮಾಡುತ್ತಿರುವಾಗ ಹೃದಯಾಘಾತ, 10 ವರ್ಷದ ಮಗನ ಎದುರಲ್ಲೇ ಪ್ರಾಣ ಬಿಟ್ಟ ತಂದೆ

112

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಸಣ್ಣ ಪ್ರಾಯದ ವ್ಯಕ್ತಿಗಳೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ. ಕೊರೋನಾ ಲಸಿಕೆ ಪಡೆದ ನಂತರದ ದಿನಗಳಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ಯುವ ಜನತೆಯನ್ನು ಹೆಚ್ಚು ಆತಂಕಕ್ಕೆ ಈಡು ಮಾಡಿದೆ.

ಈ ನಡುವೆಯೇ ಮಂಗಳೂರಿನ ಸುರತ್ಕಲ್ ಮೂಲದ 37 ವರ್ಷದ ಯುವಕರೊಬ್ಬರು ಶಬರಿಮಲೆಗೆ ತೆರಳಿ ಅಲ್ಲಿನ ಪಂಪಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಕಾಟಿಪಳ್ಳ ನಿವಾಸಿ ಸಂದೀಪ್‌ ಶೆಟ್ಟಿ ಹೃದಯಾಘಾತದಿಂದ ಮೃತಪಟ್ಟವರಾಗಿದ್ದಾರೆ. ಅವರು ಶುಕ್ರವಾರ ಅವರ 10 ವರ್ಷದ ಮಗನ ಹರಕೆಯ ಸಲುವಾಗಿ ಮಗನ ಜತೆ ಶಬರಿಮಲೆಗೆ ತಂಡದೊಂದಿಗೆ ಹೊರಟಿದ್ದರು.

ಈ ವೇಳೆ ಪಂಪಾ ಸ್ನಾನಘಟ್ಟದ ಬಳಿ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಅವರು ಕಾಟಿಪಳ್ಳ ನಿತ್ಯಾನಂದ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕೇಸರಿ ಯುವಕ ಮಂಡಲದ ಪದಾಧಿಕಾರಿಯಾಗಿದ್ದರು. ನಿತ್ಯಾನಂದ ಕೆಟರರ್ಸ್ ಅನ್ನು ನಡೆಸುತ್ತಿದ್ದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Click 👇

https://newsnotout.com/2024/05/anjali-mother-and-sister-issue
https://newsnotout.com/2024/05/coaching-centre-and-education-centre
See also  ಖ್ಯಾತ ಯೂಟ್ಯೂಬರ್ ರಣವೀರ್ ಅಲಹಾಬಾದಿಯಗೆ ಬಂಧನದಿಂದ ತಾತ್ಕಾಲಿಕ ರಿಲೀಫ್..! ಸುಪ್ರೀಂ ಕೋರ್ಟ್ ಆದೇಶ
  Ad Widget   Ad Widget   Ad Widget   Ad Widget   Ad Widget