ಕ್ರೈಂದೇಶ-ವಿದೇಶಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ಆತ್ಮಹತ್ಯೆಗೆ ಶರಣಾದ ‘ಬ್ರಹ್ಮಗಂಟು’ ಸೀರಿಯಲ್‌ ನಟಿ ಶೋಭಿತಾ..! ಆತ್ಮಹತ್ಯೆಗೂ ಮುನ್ನ ಫೋಟೋವೊಂದನ್ನು ಶೇರ್‌ ಮಾಡಿದ್ದ ನಟಿ..!

ನ್ಯೂಸ್ ನಾಟೌಟ್: ಬ್ರಹ್ಮಗಂಟು ಸೀರಿಯಲ್‌ ನಲ್ಲಿ ನಟಿಸಿ ಖ್ಯಾತರಾಗಿದ್ದ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ (ನ.30) ತಡರಾತ್ರಿ ಹೈದರಾಬಾದ್‌ ನಲ್ಲಿ ಈ ಘಟನೆ ನಡೆದಿದೆ.

2 ವರ್ಷಗಳ ಹಿಂದೆ ಹಾಸನ ಮೂಲದ ಶೋಭಿತಾ ಮದುವೆಯಾಗಿ ಹೈದರಾಬಾದ್‌ ನಲ್ಲಿ ಸೆಟಲ್‌ ಆಗಿದ್ದರು. ಇತ್ತೀಚೆಗೆ ಬಣ್ಣದ ಲೋಕದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಇದೀಗ ಶೋಭಿತಾ ಆತ್ಮಹತ್ಯೆಯ ಸುದ್ದಿ ಕೇಳಿಬಂದಿದೆ. ಇನ್ನೂ ಮರಣೋತ್ತರ ಪರೀಕ್ಷೆಯ ನಂತರ ನಟಿಯ ಮೃತದೇಹ ಬೆಂಗಳೂರಿಗೆ ತರುವ ಸಾಧ್ಯತೆಯಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

ಇನ್ನೂ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಟಿ ನಗು ನಗುತ್ತಾ ಇರೋ ಚೆಂದದ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಆ ನಂತರ ಈ ಘಟನೆ ನಡೆದಿದೆ. ‘ಫಸ್ಟ್‌ ಡೇ ಫಸ್ಟ್‌ ಶೋ’ ಸಿನಿಮಾದಲ್ಲಿ ಶೋಭಿತಾ ನಟಿಸಿದ್ದರು. ಜನಪ್ರಿಯ ಬ್ರಹ್ಮಗಂಟು ಸೀರಿಯಲ್‌ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿ ಕೆಲಸ ಮಾಡಿದ್ದರು.

Click

https://newsnotout.com/2024/12/kodagu-elephant-training-camp-for-andra-forest-department-personnel
https://newsnotout.com/2024/12/kannada-news-waqf-kannada-news-viral-news-andra-pradesha-viral-news
https://newsnotout.com/2024/12/uttara-kannada-earth-quack-hindu-maha-sagara-viral-news
https://newsnotout.com/2024/12/fbi-director-indian-origin-kashyap-viral-news-donald-trump
https://newsnotout.com/2024/12/cm-siddaramayya-kannada-news-1-lakh-rupees-fj
https://newsnotout.com/2024/12/cyclone-issue-at-chennai-kannada-news-viral-video-air-india-landing

Related posts

ಚುನಾವಣಾ ಪ್ರಚಾರದಲ್ಲಿ ಮದುವೆ ಯಾವಾಗ ಎಂದು ಕೇಳಿದ ಕಾರ್ಯಕರ್ತರು..! ಉತ್ತರ ಕೊಟ್ಟು ವೇದಿಕೆಯಿಂದ ಇಳಿದ ರಾಹುಲ್..! ಇಲ್ಲಿದೆ ವಿಡಿಯೋ

ಪೊಲೀಸ್‌ ಇಲಾಖೆಯ 2,400 KSRP ಕಾನ್ ಸ್ಟೇಬಲ್ ಗಳ ನೇಮಕಕ್ಕೆ ಸರ್ಕಾರ ಆದೇಶ, ತುರ್ತು ಸಂದರ್ಭಗಳನ್ನು ನಿಭಾಯಿಸಲು ಬೆಟಾಲಿಯನ್ ಗಳ ತಯಾರಿಗೆ ಸಿದ್ಧತೆ

ಉಡುಪಿ: ಕೊಡಪಾನ ತೆಗೆಯಲು ಬಾವಿಗೆ ಇಳಿದ ವ್ಯಕ್ತಿ ಬಿದ್ದು ಸಾವು..! ಹೋಟೆಲ್‌ ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ..!