ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಮ್ಯಾನ್ಮಾರ್‌ ಉಗ್ರರ ಮೇಲೆ ಭಾರತ ಬಾಂಬ್‌ ದಾಳಿ! ಅಷ್ಟಕ್ಕೂ ಅಂದು ಅಲ್ಲೇನಾಯ್ತು..?

ನ್ಯೂಸ್ ನಾಟೌಟ್ : ಮ್ಯಾನ್ಮಾರ್‌ನಲ್ಲಿರುವ (Myanmar) ಉಗ್ರರ ಶಿಬಿರದ ಮೇಲೆ ಭಾರತ ಡ್ರೋನ್‌ (Drone) ಮೂಲಕ ಬಾಂಬ್‌ ದಾಳಿ (Bomb Attack) ನಡೆಸಿದೆ.
ಭಾನುವಾರ(ಜ.7) ತನ್ನ ಶಿಬಿರದ ಮೇಲೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ ಎಂದು ಪರೇಶ್ ಬರುವಾ ನೇತೃತ್ವದ ಉಲ್ಫಾ-I ಹೇಳಿಕೊಂಡಿದೆ.

ಭಾನುವಾರ ಸಂಜೆ 4:10, 4:12 ಮತ್ತು 4:20 ಕ್ಕೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ. ದಾಳಿಯಿಂದ ಇಬ್ಬರು ಗಾಯಗೊಂಡಿದ್ದು, ಡ್ರೋನ್‌ ದಾಳಿಯನ್ನು ಭಾರತೀಯ ಭದ್ರತಾ ಪಡೆಗಳು ನಡೆಸಿವೆ ಎಂದು ಸಂಘಟನೆಯು ಹೇಳಿಕೊಂಡಿದೆ ಎನ್ನಲಾಗಿದೆ.

ಮೊದಲ ಎರಡು ಸ್ಫೋಟಗಳಲ್ಲಿ ನಮ್ಮ ಸಂಘಟನೆಯ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರನೇ ಬಾಂಬ್ ಸ್ಫೋಟಿಸಲಿಲ್ಲ. ಈ ರೀತಿಯ ದಾಳಿಯಿಂದ ನಾವು ನಮ್ಮ ಉದ್ದೇಶದಿಂದ ವಿಚಲಿತಗೊಳ್ಳುವುದಿಲ್ಲ ಎಂದು ಹೇಳಿದೆ.

ಭಾರತದ ವಿದೇಶಾಂಗ ಸಚಿವಾಲಯ ಇಲ್ಲಿಯವರೆಗೆ ಈ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

Related posts

ಯುವತಿಗೆ ಬಸ್ ನಲ್ಲಿ ಕಿರುಕುಳ ಪ್ರಕರಣ: ಹಿಂದೂ ಸಂಘಟನೆಯವರು ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷಿಸಿದರೇ..?, ಯುವತಿಯ ಮೈ ಕೈ ಟಚ್ ಮಾಡಿ ಅಸಭ್ಯ ವರ್ತನೆ, ದೂರಿನಲ್ಲಿ ಏನಿದೆ..?

ಉಡುಪಿಯ ತ್ರಾಸಿ ಬೀಚ್‌ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ ..! ಪ್ರವಾಸಿಗ ಪಾರು, ಬೋಟ್ ರೈಡರ್ ಕಣ್ಮರೆ..!

ವಿರಾಜಪೇಟೆ ನಗರದ ರಾಜ್ಯ ಹೆದ್ದಾರಿಯಲ್ಲಿ ಹುಲಿ ಪ್ರತ್ಯಕ್ಷ..! ಇಂದು (ಡಿ.18) ರಾತ್ರಿ ಕ್ಯಾಮೆರಾ ಅಳವಡಿಸಲು ಸೂಚನೆ, ಕಾರ್ಯಾಚರಣೆಗೆ ತಯಾರಿ