ಕೆವಿಜಿ ಕ್ಯಾಂಪಸ್‌

ಸುಳ್ಯ: ಕೆವಿಜಿ ಕಾನೂನು ಕಾಲೇಜಿನಲ್ಲಿ ವಿಶೇಷ ಕಾರ್ಯಾಗಾರ, ವಿಶ್ವವಿದ್ಯಾನಿಲಯ ವಲಯ ಸಂಪರ್ಕಾಧಿಕಾರಿ ಕೆಶ್ಕಿ ತಿವಾರಿ ಅವರಿಂದ ಉಪನ್ಯಾಸ

ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಕಾನೂನು ಕಾಲೇಜಿನಲ್ಲಿ ಗುರುವಾರ (ನ.21) ” ವಿದೇಶದಲ್ಲಿ ವಿದ್ಯಾಭ್ಯಾಸ ತಿಳುವಳಿಕೆ ಮತ್ತು ಕಾನೂನು ನಿಯಮಗಳು” ಎಂಬ ವಿಷಯದ ಕುರಿತಾಗಿ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ ಉದಯಕೃಷ್ಣ ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ವಿ. ದಾಮೋದರ ಗೌಡ, ಕಾಲೇಜಿನ ಕಾನೂನು ನೆರವು ಸಮಿತಿಯ ಸಂಯೋಜಕಿ ಕಲಾವತಿ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ವಿಶ್ವವಿದ್ಯಾನಿಲಯ ವಲಯ ಸಂಪರ್ಕಾಧಿಕಾರಿ ಕೆಶ್ಕಿ ತಿವಾರಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಪ್ರಲೋಕ್ಷ ಎಲ್ ಪಿ ಹಾಗೂ ಶ್ವೇತಲ್ ಬಿ.ಆರ್ ಪ್ರಾರ್ಥಿಸಿದರು. ವಂದನ ಎಸ್ ಪಿ ಸ್ವಾಗತಿಸಿ, ಅನೀಶ ವಂದಿಸಿದರು. ಕೃತನ್ ಕೆ.ಕೆ. ಕಾರ್ಯಕ್ರಮ ನಿರೂಪಿಸಿದರು.

Related posts

ಸುಳ್ಯ: ಎನ್ನೆಂಸಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಸುಳ್ಯ: ಕ್ಷಯ ರೋಗದ ಕುರಿತು ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ನೇತೃತ್ವದಲ್ಲಿ ಆಯೋಜನೆ

ಸುಳ್ಯ: ಕೆವಿಜಿ ಕಾನೂನು ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ