ಕರಾವಳಿ

ಕರಾವಳಿಯಲ್ಲಿ ಚಾಕೊಲೆಟ್‌ ರೂಪದಲ್ಲಿ ಮಾದಕ ದ್ರವ್ಯ ಮಾರಾಟ..!, 100 ಕೆಜಿ ಮಾದಕ ದ್ರವ್ಯ ವಶ, ಇಬ್ಬರ ಬಂಧನ

ನ್ಯೂಸ್‌ ನಾಟೌಟ್‌: ಕರಾವಳಿಯಲ್ಲಿ ಮಾದಕ ದ್ರವ್ಯಗಳ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಇದೀಗ ಬೇರೆ ಬೇರೆ ರೂಪಗಳಲ್ಲಿ ಮಂಗಳೂರಲ್ಲಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪಾಂಡೇಶ್ವರ ಪೊಲೀಸರು ಬೇಧಿಸಿ ಸುಮಾರು 100 ಕೆಜಿ ಮಾದಕ ದ್ರವ್ಯ ಮಿಶ್ರಿತ ಚಾಕೊಲೆಟ್‌ಗಳನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

ಮಾದಕ ವಸ್ತು ಮಿಶ್ರಿತ ಬಾಂಗ್ ಎಂಬ ಚಾಕೊಲೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಟ್ಟು ಸುಮಾರು 100ಕೆಜಿ ಚಾಕೊಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರದ ರಥಬೀದಿಯಲ್ಲಿ ಮನೋಹರ್ ಶೇಟ್ ಮತ್ತು ನಗರದ ಫಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬವರನ್ನು ಬಂಧಿಸಲಾಗಿದೆ. ಈ ಚಾಕೊಲೆಟ್‌ನ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಿದ್ದು, ಮುಂಬರುವ ವರದಿಗಳ ಪ್ರಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂಧಿದೆ.

Related posts

ಕೊಳ್ಳೇಗಾಲದಿಂದ ಬರುತ್ತಿರುವಾಗ ಏಕಾಏಕಿ ಸಿಡಿದ KSRTC ಬಸ್ ನ ಟಯರ್..!‌ ಪವಾಡವೆಂಬಂತೆ ಪಾರಾದ ಪ್ರಯಾಣಿಕರು..!

ಮಡಿಕೇರಿ:ಎಂಡಿಎಂಎ ಮಾರಾಟ ಮಾಡಲು ಯತ್ನ; ಆರೋಪಿ ಪೊಲೀಸ್ ಬಲೆಗೆ

ಸುಳ್ಯ:’ಅಂಜಲಿ ಮೊಂಟೆಸ್ಸರಿ ಸ್ಕೂಲ್’ ಪ್ರಸ್ತುತ ಪಡಿಸುತ್ತಿದೆ “ಚಿಣ್ಣರ ಕಲರವ”,’ಬೇಸಿಗೆ ಶಿಬಿರ’ದಲ್ಲಿ ಚಿಣ್ಣರ ‘ಕನಸುಗಳಿಗೆ ರೆಕ್ಕೆ’..! ಎಲ್ಲಿ?ಹೇಗೆ?ಯಾವಾಗ? ಅನ್ನೋದಕ್ಕೆ ಈ ರಿಪೋರ್ಟ್ ಓದಿ..