ಕ್ರೀಡೆ/ಸಿನಿಮಾಕ್ರೈಂ

ಸೆಲ್ಫಿಗಾಗಿ ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್! ಮುಂದೇನಾಯ್ತು ನೀವೇ ನೋಡಿ, ಇಲ್ಲಿದೆ ವೈರಲ್ ವಿಡಿಯೋ

350

ನ್ಯೂಸ್ ನಾಟೌಟ್: ಅಭಿಮಾನಿಯೊಬ್ಬರು ತಮ್ಮ ಒಪ್ಪಿಗೆಯಿಲ್ಲದೆ ವಿಮಾನ ನಿಲ್ದಾಣದಲ್ಲಿ ನಟ ಶಾರುಖ್ ಖಾನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ ಕಾರಣಕ್ಕೆ ಕೋಪಗೊಂಡ ಶಾರುಖ್ ಖಾನ್ ಮೊಬೈಲ್ ಅನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಅಭಿಮಾನಿಯನ್ನು ತಳ್ಳಿ ಮುನ್ನಡೆದಿದ್ದಾರೆ ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಬಾಲಿವುಡ್ ಸೂಪರ್‌ಸ್ಟಾರ್ ಮುಂಬೈಗೆ ಬಂದಿಳಿದರು. ಕಪ್ಪು ಬಟ್ಟೆ ಧರಿಸಿ, ಶಾರುಖ್ ಅವರು ವಿಮಾನ ನಿಲ್ದಾಣದಿಂದ ಹೊರಬಂದು ಮಾಧ್ಯಮದತ್ತ ಕೈ ಬೀಸುತ್ತಿರುವುದನ್ನು ಕಂಡು ಅಭಿಮಾನಿಯೊಬ್ಬರು ಅವರ ಬಳಿಗೆ ಬಂದು, ಅವರ ಅನುಮತಿಯನ್ನು ಕೇಳದೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಶಾರುಖ್ ಈ ವೇಳೆ ಆತನನ್ನು ತಳ್ಳಿ ಕೋಪದಿಂದ ವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರು ಅಸಮಾಧಾನಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

See also  ಮಂಗಳೂರಿನ ಯುವತಿ ಸುಳ್ಯಕ್ಕೆ ಬಂದು ಟ್ಯಾಬ್ಲೆಟ್ ಸೇವನೆ, ತೀವ್ರ ಅಸ್ವಸ್ಥ, ಐಸಿಯುನಲ್ಲಿ ಚಿಕಿತ್ಸೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget