ಕ್ರೈಂ

ಬಾವನ ಮದುವೆಯಲ್ಲಿ ಪತ್ನಿಯ ಜಬರ್ ದಸ್ತ್ ಡ್ಯಾನ್ಸ್..! ಪತ್ನಿಯ ಅವತಾರಕ್ಕೆ ಬೇಸರಗೊಂಡು ರೈಲಿನಡಿಗೆ ತಲೆಕೊಟ್ಟ ಗಂಡ

ನ್ಯೂಸ್ ನಾಟೌಟ್: ಬಾವನ ಮದುವೆಯಲ್ಲಿ ಪತ್ನಿ ಡ್ಯಾನ್ಸ್ ಮಾಡಿದ್ದಕ್ಕೆ ಬೇಸರಗೊಂಡು ವ್ಯಕ್ತಿಯೊಬ್ಬ ತನ್ನ ತಲೆಯನ್ನು ರೈಲಿಗೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬಿಹಾರದ ಬದಾರಿಯಾದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬಹುಲಾ ಗ್ರಾಮದ ನಿವಾಸಿ 35 ವರ್ಷದ ಗೋಪಾಲ್‌ ಸಿಂಗ್‌ ರಸೂಲ್ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹೇಂದ್ರ ನಾಥ್ ಹಾಲ್ಟರ್ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೋಪಾಲ್‌ ಸಿಂಗ್‌ ಬೇನತ್ ಗ್ರಾಮದಲ್ಲಿ ತನ್ನ ಪತ್ನಿಯ ಸಹೋದರನ ಮದುವೆ ಸಮಾರಂಭಕ್ಕೆ ತೆರಳಿದ್ದ. ಈ ವೇಳೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಪತ್ನಿಯನ್ನು ನೋಡಿ ಅಸಮಾಧಾನಗೊಂಡಿದ್ದ ಗೋಪಾಲ್‌ ಆಕೆಯನ್ನು ತಡೆದಿದ್ದಾನೆ.

ಕುಟುಂಬಸ್ಥರ ಮಾಹಿತಿ ಪ್ರಕಾರ ಗೋಪಾಲ್‌ ಡಾನ್ಸ್ ಮಾಡುತ್ತಿದ್ದ ತನ್ನ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ್ದ. ಆದರೆ ಆಕೆ ಮಾತ್ರ ಆತನ ಮಾತಿಗೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಸಣ್ಣ ಜಗಳ ಆಗಿತ್ತು. ಅಷ್ಟೇ ಅಲ್ಲದೇ ಪತಿ ಪತ್ನಿಯರ ಜಗಳಕ್ಕೆ ಗೋಪಾಲ್‌ ಬಾವ ಕೂಡ ಎಂಟ್ರಿ ಕೊಟ್ಟಿದ್ದ. ಆಗ ಬಾವ-ಬಾಮೈದರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಇದರಿಂದ ತೀರ ಬೇಸರಗೊಂಡಿದ್ದ ಗೋಪಾಲ್‌, ರೈಲು ಬರುತ್ತಿದ್ದ ಸಮಯ ನೋಡಿಕೊಂಡು ಹಳಿಗೆ ಹಾರಿಗೆ ಪ್ರಾಣ ಬಿಟ್ಟಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿ ಗೋಪಾಲ್‌ ಮೃತದೇಹವನ್ನು ರೈಲಿನಡಿಯಿಂದ ಹೊರ ತೆಗೆದು ಕುಟುಂಬಸ್ಥರಿಗೆ ಮಾಹಿತಿ ನೀಡಿದರು.

ಗೋಪಾಲ ಸಿಂಗ್‌ ಕುಟುಂಬಸ್ಥರು ಹೇಳುವ ಪ್ರಕಾರ ಆತನಿಗೆ ಮೊದಲಿನಿಂದಲೂ ಮಾನಸಿಕ ಸಮಸ್ಯೆ ಇತ್ತು. ಇದಕ್ಕೂ ಮುನ್ನ ದಿಲ್ಲಿ ಸಾರಿಗೆ ಮತ್ತು ಎಲ್‌ಐಸಿಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ, 10 ವರ್ಷದ ಮಗಳು ಹಾಗೂ ಅಣ್ಣನ ಜೊತೆ ಬದುಕುತ್ತಿದ್ದ ಎನ್ನಲಾಗಿದೆ. ಒಟ್ಟಿನಲ್ಲಿ ಕುಳಿತು ಬಗೆಹರಿಸಬಹುದಾಗಿದ್ದ ಸಮಸ್ಯೆ ಒಬ್ಬ ವ್ಯಕ್ತಿ ಸಾವಿಯಲ್ಲಿ ಅಂತ್ಯವಾಗಿರುವ ಬಗ್ಗೆ ಕುಟುಂಬಸ್ಥರು ದುಃಖ ವ್ಯಕ್ತಪಡಿಸಿದ್ದಾರೆ.

Related posts

ಹತ್ಯೆಗೂ ಮುನ್ನ ಹಮಾಸ್ ಮುಖ್ಯಸ್ಥನ ಕೊನೆ ಕ್ಷಣಗಳ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್..! ಇಲ್ಲಿದೆ ವಿಡಿಯೋ

Tiger Claw: ಹುಲಿ ಉಗುರಿನ ವಿಚಾರ ನಿಮ್ಮ ವ್ಯಾಪ್ತಿಗೆ ಬರಲ್ಲ, ನಾವು ನಿರ್ಧಾರ ಮಾಡ್ತೀವಿ ಎಂದ ಕೇಂದ್ರ ಸರ್ಕಾರ..! ಈ ಬಗ್ಗೆ ಅರಣ್ಯ ಸಚಿವ ಹೇಳಿದ್ದೇನು..? ಆದೇಶದ ಅವಧಿ ಮುಕ್ತಾಯ

ಕರೆಂಟ್‌ ಕಂಬವನ್ನೇರಿ ಲೈನ್‌ ಮ್ಯಾನ್‌ ಗೆ ಧಮ್ಕಿ ಹಾಕಿದ ಮಹಿಳೆ..! ವಿದ್ಯುತ್ ಬಿಲ್ ಪಾವತಿಸದ ಮಹಿಳೆಯ ಭಂಡ ಧೈರ್ಯ..! ಇಲ್ಲಿದೆ ವೈರಲ್ ವಿಡಿಯೋ