ಕೊಡಗು

ಮಡಿಕೇರಿ: ಜೀವನವನ್ನೇ ಕತ್ತಲನ್ನಾಗಿಸಿದ ಅರಣ್ಯಾಧಿಕಾರಿ,ಈ ನಿರ್ಧಾರ ತೆಗೆದುಕೊಂಡಿದ್ದೇಕೆ?

212

ನ್ಯೂಸ್ ನಾಟೌಟ್ : ಯುವ ಅರಣ್ಯಾಧಿಕಾರಿಯೊಬ್ಬರು (forest officer) ತನ್ನ ಜೀವನವನ್ನೇ ಕತ್ತಲನ್ನಾಗಿಸಿದ ಘಟನೆ (self harm) ಕೊಡಗಿನಿಂದ ವರದಿಯಾಗಿದೆ.

ಮಡಿಕೇರಿಯ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ಈ ಘಟನೆ ನಡೆದಿದೆ. ಮಂಡ್ಯ ಮೂಲದ ರಶ್ಮಿ(27) ಮೃತರು ಎಂದು ತಿಳಿದು ಬಂದಿದೆ.ರಶ್ಮಿಯವರು ಅರಣ್ಯ ಇಲಾಖೆಯಲ್ಲಿ DRFO ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.ಕೊಡಗು ಜಿಲ್ಲೆ ಮಡಿಕೇರಿಯ ಅರಣ್ಯ ಭವನ ಬಳಿ ಇರುವ ವಸತಿ ಗೃಹದಲ್ಲಿ ತಂಗಿದ್ದರು.

ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಅವರು ಈ ನಿರ್ಧಾರವನ್ನು ಮಾಡಿದ್ದು,ನಿಖರ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಮಡಿಕೇರಿ:ಆಸ್ತಿ ವಿಚಾರಕ್ಕೆ ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ ,ಆರೋಪಿ ಅಣ್ಣನನ್ನು ಬಂಧಿಸಿದ ಪೊಲೀಸರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget