Uncategorized

ಗರ್ಭಿಣಿ ಶ್ವಾನಕ್ಕೆ ಸೀಮಂತ, ಫೋಟೋ ವೈರಲ್

ನ್ಯೂಸ್‌ ನಾಟೌಟ್: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿಗೆ ಸೀಮಂತ ಮಾಡಿ ಮನೆ ಮಂದಿ ಸಂಭ್ರಮ ಪಡುತ್ತಾರೆ. ಆದರೆ ಇಲ್ಲೊಂದು ಮನೆ ಮಂದಿ ತಮ್ಮ ಮನೆಯ ಗರ್ಭಿಣಿ ಸಾಕು ನಾಯಿಗೆ ಸೀಮಂತ ಮಾಡಿ ಸುದ್ದಿಯಾಗಿದ್ದಾರೆ.

ಸದ್ಯ ಈ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಗುರುಪುರದ ಆಣೆ ಬಳಿಯ ಆಗಸರ ಗುಡ್ಡೆ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಬಾಸ್ಕರ ಮಡಿವಾಳ-ಮಂಜುಳಾ ದಂಪತಿ ನಾಲ್ಕು ದಿನಗಳ ಹಿಂದೆ ತಮ್ಮ ಸಾಕುನಾಯಿಗೆ ಸೀಮಂತ ನಡೆಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ವಾನವನ್ನು ಖುಚರ್ಚಿಯಲ್ಲಿ ಕೂರಿಸಲಾಗಿದೆ. ಬಗೆಬಗೆಯ ಭಕ್ಷ್ಯ ಭೋಜನಗಳನ್ನು ಸಿಹಿ ತಿಂಡಿ , ಐಸ್ ಕ್ರೀಂ ಗಳನ್ನು ಬಡಿಸಿದ್ದಾರೆ. ಶ್ವಾನವು ತನಗೆ ಬೇಕಾದಷ್ಟುನ್ನು ಸಂತೃಪ್ತಿಯಿಂದ ತಿಂದಿದೆ.

Related posts

ಭಾಗಮಂಡಲ, ಜೋಡುಪಾಲ, ಕೊಯನಾಡು, ಸಂಪಾಜೆ ಮಳೆಯಿಂದ ತತ್ತರ..!

ಎರಡು ಸಲ ‘ಕಾಂತಾರ’ ಸಿನಿಮಾ ನೋಡಿದ ಬಾಹುಬಲಿ ಪ್ರಭಾಸ್ ಹೇಳಿದ್ದೇನು?

ಗೂನಡ್ಕದಲ್ಲಿ ಆಂಟಿ ವಿಷಯದಲ್ಲಿ ಹೊಡೆದಾಟ? ಓರ್ವ ಆಸ್ಪತ್ರೆಗೆ ದಾಖಲು