ಕ್ರೀಡೆ/ಸಿನಿಮಾವಿಡಿಯೋವೈರಲ್ ನ್ಯೂಸ್

ಗೂಗಲ್‌ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ಯಾರು..? ಗೂಗಲ್ ಬಿಡುಗಡೆ ಮಾಡಿದ ವಿಡಿಯೋದಲ್ಲೇನಿದೆ?

ನ್ಯೂಸ್ ನಾಟೌಟ್: ಸರ್ಜ್‌ ಇಂಜಿನ್‌ ದೈತ್ಯ ಕಂಪೆನಿಯಾಗಿರುವ ಗೂಗಲ್‌, ತನ್ನ 25 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ (ಸರ್ಚ್‌) ವಿಷಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಕ್ರಿಕೆಟಿಗರ ಪೈಕಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದು ಹೇಳಿದೆ.

ಗೂಗಲ್‌ನ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಸರ್ಚ್‌ ಮಾಡಲ್ಪಟ್ಟ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಇತರ ಘಟಾನುಘಟಿಗಳನ್ನು ಹಿಂದಿಕ್ಕಿ ವಿರಾಟ್‌ ಕೊಹ್ಲಿಗೆ ದೊರಕಿದೆ.
ಆದರೆ ಅತ್ಯಂತ ಹೆಚ್ಚು ಸರ್ಚ್‌ ಮಾಡಲ್ಪಟ್ಟ ಅಥ್ಲೀಟುಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅಗ್ರ ಸ್ಥಾನದಲ್ಲಿಲ್ಲ. ಈ ಸ್ಥಾನವು ರಿಯಲ್‌ ಮ್ಯಾಡ್ರಿಡ್‌ ಮತ್ತು ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡದ ಫುಟ್ಬಾಲ್‌ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಪಾಲಾಗಿದೆ.

ಕೊಹ್ಲಿ ಇತ್ತೀಚೆಗೆ ಮುಗಿದ ಏಷ್ಯಾಕಪ್‌ನಲ್ಲಿ ಕೊಹ್ಲಿ 13000 ಏಕದಿನ ರನ್‌ಗಳನ್ನು ಪೂರೈಸಿದರು. 267 ಇನ್ನಿಂಗ್ಸ್‌ಗಳಲ್ಲಿ 13000 ರನ್‌ ಗಳಿಸುವ ಮೂಲಕ ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ ಬ್ಯಾಟರ್‌ ಎಂಬ ಖ್ಯಾತಿಗೆ ಪಾತ್ರರಾದರು.

ಸದ್ಯ ವಿರಾಟ್‌ ಕೊಹ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ಕೂಡಾ ಹಿಂದಿಕ್ಕಿದ್ದಾರೆ. ಕತ್ರೀನಾ ಕಳೆದ ವರ್ಷದಿಂದ ಗೂಗಲ್‌ನ ಪಟ್ಟಿಯ ಪ್ರಕಾರ “2022ರಲ್ಲಿ ವಿಶ್ವದಾದ್ಯಂತ ಹುಡುಕಾಡಲ್ಪಟ್ಟ ಏಷ್ಯಾದ ವ್ಯಕ್ತಿ”‌ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

https://newsnotout.com/2023/12/kantara-news-kantara-call-for-candidates/

Related posts

ದೊಣ್ಣೆಯಿಂದ ಹೊಡೆದು ಸ್ವಾಮೀಜಿಯ ಬರ್ಬರ ಹತ್ಯೆ..! ಉಳಿದಿಬ್ಬರು ಸ್ವಾಮೀಜಿಗಳನ್ನು ಬಂಧಿಸಿದ ಪೊಲೀಸರು..!

ಅಶ್ವಿನಿ ಪುನೀತ್ ರಾಜ್​ಕುಮಾರ್ ಫೋಟೋ ಬಳಸಿ ಡೀಪ್ ಫೇಕ್ ವಿಡಿಯೋ ಹಂಚಿಕೊಂಡ ವ್ಯಕ್ತಿ..! ಫಿಲ್ಮ್ ಚೇಂಬರ್ ​ಗೆ ದೂರು ನೀಡಿದ ಅಭಿಮಾನಿಗಳು..!

ಚಿನ್ನಾಭರಣ ಇದ್ದಲ್ಲಿ ನಿಂಬೆಹಣ್ಣುಗಳು ಪ್ರತ್ಯಕ್ಷ..! ಅಮವಾಸ್ಯೆಯ ಪೂಜೆಗೆ ಬಂದ ನಕಲಿ ಜ್ಯೋತಿಷಿ ಮಾಡಿದ್ದೇನು?