Latestದೇಶ-ವಿದೇಶವೈರಲ್ ನ್ಯೂಸ್

ಸಮುದ್ರದಲ್ಲಿ ಇರಾನಿನ ಮೀನುಗಾರಿಕಾ ಹಡಗಿನಲ್ಲಿದ್ದ ಪಾಕ್‌ ವ್ಯಕ್ತಿಯನ್ನು ಶಸ್ತ್ರಚಿಕಿತ್ಸೆ ಮಾಡಿ ಕಾಪಾಡಿದ ಭಾರತೀಯ ನೌಕಾಪಡೆ..! ಸತತ 3ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ..!

1.2k

ನ್ಯೂಸ್ ನಾಟೌಟ್: ಓಮನ್ ಕರಾವಳಿಯಲ್ಲಿ ಇರಾನಿನ ಮೀನುಗಾರಿಕಾ ಹಡಗಿನಲ್ಲಿದ್ದ ಅಸ್ವಸ್ಥಗೊಂಡಿದ್ದ ಪಾಕಿಸ್ತಾನಿ ಸಿಬ್ಬಂದಿಗೆ ಭಾರತೀಯ ನೌಕಾಪಡೆ ತುರ್ತು ವೈದ್ಯಕೀಯ ನೆರವು ನೀಡಿ, ಮಾನವೀಯತೆ ಮೆರೆದಿದೆ.

ಹಡಗಿನ ಸಿಬ್ಬಂದಿಯೊಬ್ಬರು ಎಂಜಿನ್‌ ನ ಕೆಲಸ ಮಾಡುವಾಗ ಅವರ ಕೈ ಬೆರಳುಗಳಿಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಈ ವೇಳೆ ಇರಾನಿನ ಧೋ ಅಲ್ ಒಮೀದಿಯಿಂದ ಬಂದ ತುರ್ತು ಕರೆಗೆ ಭಾರತೀಯ ನೌಕಪಡೆ ಸ್ಪಂದಿಸಿದೆ. ಬಳಿಕ ಓಮನ್ ಕರಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕಾಪಡೆಯ ರಹಸ್ಯ ಯುದ್ಧನೌಕೆ ಐಎನ್ ಎಸ್ ತ್ರಿಕಾಂಡ್ (INS Trikand), ತಕ್ಷಣವೇ ಘಟನಾ ಸ್ಥಳಕ್ಕೆ ತಲುಪಿದೆ. ಅಲ್ಲದೇ ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಿದೆ.

ತ್ರಿಕಂಡ್‌ ನ ವೈದ್ಯಕೀಯ ಸಿಬ್ಬಂದಿ ಅರಿವಳಿಕೆ ನೀಡಿ, ಬೆರಳುಗಳಿಗೆ ಹೊಲಿಗೆ ಹಾಕಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ಮಾಡಿದರು. ಚಿಕಿತ್ಸೆಯಿಂದಾಗಿ ಕೈ ಬೆರಳುಗಳ ಶಾಶ್ವತವಾಗಿ ಕಳೆದುಕೊಳ್ಳುವುದನ್ನು ತಡೆಯಲಾಯಿತು. ಅಲ್ಲದೇ ಇರಾನ್ ತಲುಪುವವರೆಗೆ ಗಾಯಗೊಂಡ ಸಿಬ್ಬಂದಿಗೆ ಅಗತ್ಯ ಔಷಧವನ್ನು ನೀಡಲಾಯಿತು ಎಂದು ನೌಕಾಪಡೆ ತಿಳಿಸಿದೆ.

ಮೀನುಗಾರಿಕಾ ಬೋಟ್‌ ನಲ್ಲಿ 11 ಪಾಕಿಸ್ತಾನಿಗಳು (ಒಂಬತ್ತು ಬಲೂಚ್ ಮತ್ತು ಇಬ್ಬರು ಸಿಂಧಿ) ಮತ್ತು ಐದು ಇರಾನಿನ ಸಿಬ್ಬಂದಿ ಇದ್ದರು. ಗಾಯಗೊಂಡ ಪಾಕಿಸ್ತಾನಿ (ಬಲೂಚ್) ಪ್ರಜೆಯ ಕೈಗೆ ತೀವ್ರ ಗಾಯಗಳಾಗಿತ್ತು. ಇದರ ಪರಿಣಾಮವಾಗಿ ಭಾರೀ ರಕ್ತಸ್ರಾವವಾಗಿತ್ತು ಎಂದು ನೌಕಾಪಡೆ ತಿಳಿಸಿದೆ.

ತಮ್ಮ ಸಿಬ್ಬಂದಿಯ ಜೀವವನ್ನು ಉಳಿಸುವಲ್ಲಿ ನೆರವು ನೀಡಿದ್ದಕ್ಕೆ ಭಾರತೀಯ ನೌಕಾಪಡೆಗೆ ಹಡಗಿನ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ. 

 

See also  "CM ಸಿದ್ದರಾಮಯ್ಯನವರೇ ಎಷ್ಟೇ ಹುಡುಕಾಡಿದ್ರೂ ಹೆಣ್ಣೇ ಸಿಕ್ತಿಲ್ಲ, ದಯವಿಟ್ಟು 'ಕನ್ಯೆಭಾಗ್ಯ ಕೊಡಿ", ಜಾಲತಾಣದಲ್ಲಿ ಏನಿದು ಯುವಕನ ವಿಚಿತ್ರ ಮನವಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget