Latestಕ್ರೈಂರಾಜ್ಯ

ಸಮುದ್ರದಲ್ಲಿ ಮುಳುಗಿದ ಸ್ಪೀಡ್ ಬೋಟ್..! ಸೌರವ್ ಗಂಗೂಲಿ ಸಹೋದರ ಮತ್ತು ಅತ್ತಿಗೆ ಪ್ರಾಣಾಪಾಯದಿಂದ ಪಾರು..!

221

ನ್ಯೂಸ್ ನಾಟೌಟ್: ಖ್ಯಾತ ಕ್ರಿಕೆಟರ್, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸಹೋದರ ಹಾಗೂ ಅವರ ಹೆಂಡತಿ ಪುರಿಯ ಬೀಚ್​ನಲ್ಲಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯ ಸಹೋದರ ಸ್ನೇಹಶಿಶ್ ಗಂಗೂಲಿ ಹಾಗೂ ಅವರ ಹೆಂಡತಿ ಅರ್ಪಿತಾ ರಜೆ ಎಂಜಾಯ್ ಮಾಡಲು ಒಡಿಶಾದ ಪುರಿ ಬೀಚ್ ​ಗೆ ಹೋಗಿದ್ದರು. ಈ ವೇಳೆ ಸಮುದ್ರದಲ್ಲಿ ವಾಟರ್​ ಸ್ಪೋರ್ಟ್ಸ್​​ ಗೇಮ್ ​ನಲ್ಲಿ ಸ್ಪೀಡ್​ ಬೋಟ್​ ಆಡುವಾಗ, ಅದು ಮುಗುಚಿ ಬಿದ್ದಿದೆ. ನೀರಿನಲ್ಲಿ ಜೀವ ಭಯದಿಂದ ರಕ್ಷಣೆಗಾಗಿ ಇಬ್ಬರು ಮುಳುಗುತ್ತ ಕೂಗುತ್ತಿದ್ದರು. ಆಗ ತಕ್ಷಣ ಲೈಫ್ ​ಗಾರ್ಡ್ಸ್ ಈಜಿ ಹೋಗಿ​ ಸಮುದ್ರದಲ್ಲಿ ಸ್ನೇಹಶಿಶ್ ಹಾಗೂ ಹೆಂಡತಿ ಅರ್ಪಿತಾ ಅವರನ್ನು ರಕ್ಷಣೆ ಮಾಡಿ, ದಡಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಮಾತನಾಡಿದ ಅರ್ಪಿತಾ ಅವರು, “ಬೋಟ್​ನಲ್ಲಿ 10 ಪ್ರವಾಸಿಗರು ತೆರಳುವಂತಹದ್ದು, ಆದ್ರೆ ಹಣದಾಸೆಗೆ ಅದರಲ್ಲಿ ಕೇವಲ 3, 4 ಜನರಿಗಾಗಿ ಬೋಟ್ ಅ​ನ್ನು ಸಮುದ್ರಕ್ಕೆ ಇಳಿಸಿದರು. ಗಾಳಿ ಹಾಗೂ ಸಮುದ್ರದ ಅಲೆಗಳ ಹೊಡೆತ ಜೋರಾಗಿದ್ದರಿಂದ ಹಗುರವಾಗಿದ್ದ ಬೋಟ್​ ತಕ್ಷಣ ಮುಗುಚಿ ಬಿದ್ದಿದೆ. ಇದೇ ಕೊನೆಯ ಬೋಟ್ ಆಗಿದೆ ಎಂದು ಸಿಬ್ಬಂದಿ ಹೇಳಿದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದರೂ ಪರವಾಗಿಲ್ಲ ಬನ್ನಿ ಎಂದಿದ್ದರು. ಹೀಗಾಗಿ ಈ ಬೋಟ್​ನಲ್ಲಿ ನಾವು ತೆರಳಿದ್ದೇವು” ಎಂದು ಹೇಳಿದ್ದಾರೆ.

“ಸಮಯಕ್ಕೆ ಸರಿಯಾಗಿ ಲೈಫ್​ ಗಾರ್ಡ್ಸ್​ ಬಂದಿಲ್ಲ ಎಂದರೆ ನಾವು ಜೀವ ಸಮೇತ ಹೊರಗೆ ಬರುತ್ತಿರಲಿಲ್ಲ. ಈಗಲೂ ನಾನು ಆ ಘಟನೆಯಿಂದ ಹೊರ ಬರಲು ಆಗುತ್ತಿಲ್ಲ. ಇಂತಹ ಘಟನೆಯನ್ನು ನಾನು ಎಂದಿಗೂ ಎದುರಿಸಿರಲಿಲ್ಲ. ಆದರೆ ಒಂದು ವೇಳೆ ಬೋಟ್ ​ನಲ್ಲಿ ನಿಗದಿತ ಪ್ರವಾಸಿಗರು ಇದ್ದಿದ್ದರೇ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ. ಪಶ್ಚಿಮ ಬಂಗಾಳಕ್ಕೆ ತೆರಳಿದ ಮೇಲೆ ಸಿಎಂ ಅವರಿಗೆ ಪತ್ರ ಬರೆದು, ಇಂತಹ ಬೋಟ್​ ಅನ್ನು ಸ್ಥಗಿತ ಮಾಡುವಂತೆ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ ಎನ್ನಲಾಗಿದೆ.

See also  ಮಾಜಿ ಸಚಿವ ಎಚ್. ಡಿ. ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು, 5 ದಿನಗಳ ಪರಪ್ಪನ ಅಗ್ರಹಾರ ಜೈಲು ವಾಸ ಅಂತ್ಯ
  Ad Widget   Ad Widget     Ad Widget   Ad Widget   Ad Widget   Ad Widget