ದೇಶ-ವಿದೇಶವೈರಲ್ ನ್ಯೂಸ್

ಸಮುದ್ರದಲ್ಲಿ ಅಪರೂಪದ ಮೀನು ಪತ್ತೆ..! ಮನುಷ್ಯನಂತೆ ಕಾಣುವ ಈ ಮೀನು ಸೈನೈಡ್‌ ಗಿಂತ ಸಾವಿರ ಪಟ್ಟು ವಿಷಕಾರಿ..!

236

ನ್ಯೂಸ್ ನಾಟೌಟ್: ಸಮುದ್ರದಲ್ಲಿ(sea) ಗುರುವಾರ(ಮಾ.28) ಮೀನುಗಾರರ ಬಲೆಗೆ ಅಪರೂಪದ ಮೀನು(fish) ಸಿಕ್ಕಿದ್ದು, ಮೀನಿನ ವಿಚಿತ್ರ ರೂಪವನ್ನು ಕಂಡು ಒಂದು ಕ್ಷಣ ಮೀನುಗಾರರೇ ಹೆದರಿದ್ದಾರೆ ಎನ್ನಲಾಗಿದೆ, ಈ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

ಮೀನಿನ ಬಗ್ಗೆ ವಿಶಾಖಪಟ್ಟಣಂನ ಸಹಾಯಕ ಮೀನುಗಾರಿಕಾ ನಿರ್ದೇಶಕ ಡಾ. ಪಿ. ಶ್ರೀನಿವಾಸ್​ ರಾವ್​ ಮಾಹಿತಿ ನೀಡಿದ್ದು, ಇದು ಪಫ್ಫರ್​ ಫಿಶ್​ ಎಂದು ತಿಳಿಸಿದ್ದಾರೆ. ಆದರೆ, ಸ್ಥಳೀಯ ಮೀನುಗಾರರು ಇದನ್ನು ಸಮುದ್ರ ಕಪ್ಪೆ ಎಂದು ಭಾವಿಸಿದ್ದರು. ಈ ಮೀನು ಸಮುದ್ರದ ಆಳದಲ್ಲಿ ಅಲೆದಾಡುತ್ತವೆ. ಬಲೆಗೆ ಬಿದ್ದಾಗ ಅಥವಾ ಯಾರಾದರು ದಾಳಿ ಮಾಡಿದಂತಹ ಸಂದರ್ಭದಲ್ಲಿ ತಮ್ಮ ದೇಹವನ್ನು ಬಲೂನ್​ ರೀತಿ ಮಾಡಿಕೊಳ್ಳುತ್ತವೆ. ಈ ಮೀನು ನೋಡಲು ಸ್ವಲ್ಪ ಮನುಷ್ಯನ ಮುಖವನ್ನು ಹೋಲುತ್ತದೆ ಎನ್ನಲಾಗಿದೆ.

ಈ ಪಫ್ಪರ್ ಫಿಶ್​ ತುಂಬಾ ವಿಷಕಾರಿ ಮೀನು. ಇತರ ಸಮುದ್ರ ಪ್ರಭೇದಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಈ ಮೀನಿನ ಯಕೃತ್ತಿನಲ್ಲಿ ಶಕ್ತಿಯುತವಾದ ವಿಷ ಉತ್ಪಾದನೆಯಾಗುತ್ತದೆ. ಈ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ಮಾರಕವಾಗಿದೆ. ಇದನ್ನು ಹೆಚ್ಚಾಗಿ ಜಪಾನ್​ ನಲ್ಲಿ ಸೇವನೆ ಮಾಡುತ್ತಾರೆ ಎಂದು ವರದಿ ತಿಳಿಸಿದೆ.(fishing mangalore)

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

See also  ಬೆಳ್ಳಾರೆ: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ, ವಿದೇಶದಿಂದ ಬರುತ್ತಿದ್ದಾಗ ಸೆರೆಹಿಡಿದ ಎನ್ ಐಎ ಅಧಿಕಾರಿಗಳು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget