ದೇಶ-ಪ್ರಪಂಚದೇಶ-ವಿದೇಶ

ಸಮುದ್ರದಲ್ಲಿ ದೋಣಿ ಮುಳುಗಡೆ..! 90ಕ್ಕೂ ಹೆಚ್ಚು ಮಂದಿ ಜಲಸಮಾಧಿ

ನ್ಯೂಸ್ ನಾಟೌಟ್: ದೋಣಿಯೊಂದು ಮುಳುಗಿ 90ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾದ ಘಟನೆ ಆಫ್ರಿಕಾದ ಮೊಜಾಂಬಿಕ್ ನ ಉತ್ತರ ಕರಾವಳಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಇದು ಮೀನುಗಾರಿಕಾ ದೋಣಿಯಾಗಿದ್ದು, ನಂಪ್ಯುಲಾ ಪ್ರಾಂತ್ಯದ ದ್ವೀಪಕ್ಕೆ ತೆರಳುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದು ಮತ್ತು ಪ್ರಯಾಣಿಕರ ಸಾಗಾಣಿಕೆಗೆ ಸೂಕ್ತವಲ್ಲದೇ ಇದ್ದುದು ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಮಕ್ಕಳು ಸೇರಿದಂತೆ 91 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ದೋಣಿಯಲ್ಲಿ ಒಟ್ಟು 130 ಪ್ರಯಾಣಿಕರಿದ್ದರು ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಹೊರತಾಗಿಯೂ ಇದುವರೆಗೆ ಕೇವಲ ಐದು ಮಂದಿ ಮಾತ್ರ ಉಳಿದುಕೊಂಡಿರುವುದು ದೃಢಪಟ್ಟಿದೆ.

Related posts

ಪಿಯುಸಿ ಫೇಲ್ ಆಗಿ ಟೆಂಪೋ ಓಡಿಸಲಾರಂಭಿಸಿದ ಯುವಕನೀಗ ಐಪಿಎಸ್ ಆಫೀಸರ್..!,ಈ ಯುವಕನ ಸ್ಪೂರ್ತಿದಾಯಕ ಕಥೆ ಕೇಳಿದ್ರೆ ನಿಮ್ಗೂ ಆಶ್ಚರ್ಯವಾಗುತ್ತೆ..

ಏನಿದು ಗಡಿಯಲ್ಲಿ ಜೇನುಗಳ ಕಣ್ಗಾವಲು..? ಗಡಿ ಭದ್ರತಾ ಪಡೆಯ ವಿನೂತನ ಪ್ರಯೋಗಕ್ಕೆ ಕಾರಣವೇನು? ಸೇನೆಯ ಐಡಿಯಾಕ್ಕೆ ಭಾರಿ ಮೆಚ್ಚುಗೆ

SOCIAL MEDIA: ‘ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ..? ಬೇಕಾದರೆ ಡಿಎಂ ಮಾಡಿ..!’ ಎಚ್ಚರ..! ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ ವಿಚಿತ್ರ ದಂಧೆ..!