ಕರಾವಳಿ

ಹಿಂದೂ ನಾಯಕ ಪ್ರವೀಣ್ ಕೊಲೆ ಹಿಂದೆ ಎಸ್ ಡಿ ಪಿ ಐ ಸ್ಕೆಚ್

621

ನ್ಯೂಸ್ ನಾಟೌಟ್: ಎರಡು ಮೂರು ದಿನಗಳಿಂದ ಕರಾವಳಿ ನಿಗಿನಿಗಿ ಕೆಂಡದಂತಾಗಿದೆ. ಬಿಜೆಪಿ ಯುವ ಮೋರ್ಚಾ, ಹಿಂದೂ ನಾಯಕ ಪ್ರವೀಣ್ ಹತ್ಯೆ ಆದಾಗ್ಗಿನಿಂದ ಈ ಕೊಲೆ ಹಿಂದಿನ ಹಂತಕರನ್ನು ಬಂಧಿಸಬೇಕು ಅನ್ನುವ ಕೂಗು ಮುಗ್ಗಿಲು ಮುಟ್ಟಿತ್ತು. ಸಿಎಂ ಕೂಡ ಎಡಿಜಿಪಿ ಅಲೋಕ್ ಕುಮಾರ್ ಗೆ ಖುದ್ದಾಗಿ ತನಿಖೆ ನೇತೃತ್ವ ವಹಿಸುವಂತೆ ಸೂಚಿಸಿದ್ದರು. ಅಂತೆಯೇ ಪೊಲೀಸರು ಬೆಳ್ಳಾರೆಯ ಶಂಕಿತರನ್ನೆಲ್ಲ ಬಂಧಿಸಿ ಠಾಣೆಗೆ ಕರೆದೊಯ್ದು ಬೆಂಡೆತ್ತಿದ್ದಾರೆ. ಆಗ ಹಂತಕರ ಬಾಯಿಯಿಂದ ಒಂದೊಂದೇ ಸತ್ಯ ಹೊರಬಿದ್ದಿದೆ.

ಹೌದು, ಇದೊಂದು ಸೇಡಿನ ಕೊಲೆಯಾಗಿದೆ. ಮಸೂದ್ ಕೊಲೆಗೆ ಪ್ರತೀಕಾರವಾಗಿ ಪ್ರವೀಣ್ ಹತ್ಯೆ ನಡೆದಿದೆ ಎನ್ನುವುದು ಖಚಿತಪಟ್ಟಿದೆ. ಕೊಲೆ ಹಿಂದಿರುವ ಸೂತ್ರಧಾರಿಗಳು ಎಸ್ ಡಿ ಪಿ ಐ ಹಾಗೂ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಅನ್ನುವುದು ಬಯಲಿಗೆ ಬಂದಿದೆ. ಪ್ರವೀಣ್ ಹತ್ಯೆಗೆ ಸ್ಕೆಚ್ ಹಾಕಿದವರಲ್ಲಿ ಝಾಕೀರ್ ಸವಣೂರು ಎಂಬಾತ ಎಸ್ ಡಿ ಪಿ ಐನ ಸದಸ್ಯ ಅನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಇನ್ನೋರ್ವ ಬಂಧಿತ ಶಾಫಿಕ್ ಬೆಳ್ಳಾರೆ ಪಿಎಫ್‌ಐ ಹಾಗೂ ಎಸ್ ಡಿ ಪಿ ಐ ಪಕ್ಷದ ಫಾಲೋವರ್ ಆಗಿದ್ದ ಎನ್ನುವುದು ತಿಳಿದು ಬಂದಿದೆ. ಪ್ರವೀಣ್ ನೆಟ್ಟಾರ್ ಬಿಜೆಪಿ ಸಕ್ರಿಯ ಕಾರ್ಯಕರ್ತ ಎಂದು ಹಂತಕರಿಗೆ ಝಾಕೀರ್ ಖುದ್ದಾಗಿ ಮಾಹಿತಿ ನೀಡಿದ್ದ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಸವಣೂರು ಭಾಗದಲ್ಲಿ ಜಾಕೀರ್‌ ಹಲವು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಈತನ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ಕೂಡ ದಾಖಲಾಗಿದೆ. ಸದ್ಯ ಇಬ್ಬರ ಬಂಧನ ಆಗಿದ್ದು ಇನ್ನಷ್ಟು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ಲ್ಯಾನ್ ಮಾಡಿದವರು ಈಗ ಕಂಬಿ ಎಣಿಸುತ್ತಿದ್ದರೆ ಪ್ಲ್ಯಾನ್ ಅನ್ನು ಯಥಾವತ್ ಜಾರಿಗೆ ತಂದು ಮಾರಕಾಸ್ತ್ರಗಳೊಂದಿಗೆ ಬೆಳ್ಳಾರೆ ಬಂದು ಪ್ರವೀಣ್ ಅವರನ್ನು ಕೊಚ್ಚಿ ಕೊಲೆಗೈದ ಹಂತಕರ ಭೇಟೆಗೆ ಖಾಕಿ ಪಡೆ ಬಲೆ ಹೆಣೆದಿದೆ.

See also  ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ,ಕರಾವಳಿಯಾದ್ಯಂತ ರಾಮನಾಮ ಜಪದಲ್ಲಿ ನಿರತರಾದ ರಾಮಭಕ್ತರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget