ಮನೆಯ ಟೆರೇಸ್‌ನಲ್ಲಿ ಸ್ಕಾರ್ಪಿಯೋ ಕಾರಿನಂತೆ ಕಾಣುವ ನೀರಿನ ಟ್ಯಾಂಕ್ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಬಳಸಲಾಗಿದೆ. ಆದರೆ ಈ ಟ್ಯಾಂಕ್ ನೋಡುವುದಕ್ಕೆ ಸ್ಕಾರ್ಪಿಯೋ ಕಾರಿನಂತೆಯೇ ಇದ್ದು, ಮುಂಭಾಗದಲ್ಲಿರುವ ಗ್ರಿಲ್, ಕ್ರೋಮ್ ಫಿನಿಶ್ ಹಾಗೂ ಮಹೀಂದ್ರಾ ಲೋಗೋ ನೋಡಿದರೆ ಇದು ನಿಜವಾದ ಕಾರು ಎನ್ನುವಂತಿದೆ. ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಮನೆ ಮಾಲೀಕನ ಐಡಿಯಾಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.