ಕ್ರೈಂವಿಡಿಯೋವೈರಲ್ ನ್ಯೂಸ್

ಸ್ಕೂಟರ್ ಅನ್ನು ಬೆನ್ನಟ್ಟಿದ ಬೀದಿ ನಾಯಿಗಳು! ಕಾರಿಗೆ ಡಿಕ್ಕಿ ಹೊಡೆದ ಸ್ಕೂಟರ್! ಇಲ್ಲಿದೆ ವೈರಲ್ ವಿಡಿಯೋ

255

ನ್ಯೂಸ್ ನಾಟೌಟ್ : ಬೀದಿ ನಾಯಿಗಳ ಹಿಂಡು ಮಹಿಳೆಯರು ಚಲಾಯಿಸುತ್ತಿದ್ದ ಸ್ಕೂಟರ್ ಅನ್ನು ಬೆನ್ನಟ್ಟಿಕೊಂಡು ಬಂದಿವೆ ಈ ವೇಳೆ ಸ್ಕೂಟರ್ ನಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಅವರ ಮಗು ಕಂಗಾಲಾಗಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ.

ಒಡಿಶಾದ ಬೆರ್ಹಾಂಪುರದ ಗಾಂಧಿನಗರ ಲೇನ್ 7 ರಿಂದ ಆಘಾತಕಾರಿ ಘಟನೆ ವರದಿಯಾಗಿದ್ದು, ಸಿಸಿಟಿವಿ ದ್ರಶ್ಯಾವಳಿಯ ವಿಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ಮೂವರಿಗೂ ಹಲವು ಗಾಯಗಳಾಗಿವೆ. ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆಯ ದೃಶ್ಯ ಸೆರೆಯಾಗಿದೆ. ಗಾಯಾಳುಗಳನ್ನು ಸುಪ್ರಿಯಾ, ಸಸ್ಮಿತಾ ಮತ್ತು ಆಕೆಯ ಮಗು ಎಂದು ಗುರುತಿಸಲಾಗಿದೆ.

“ನಾವು ಬೆಳಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಸುಮಾರು ಆರರಿಂದ ಎಂಟು ನಾಯಿಗಳು ನಮ್ಮನ್ನು ಹಿಂಬಾಲಿಸಲು ಪ್ರಾರಂಭಿಸಿದವು. ಆಗ, ಸ್ಕೂಟರ್‌ನ ವೇಗವನ್ನು ಹೆಚ್ಚಿಸಲು ನಾನು ನಿರ್ಧರಿಸಿದೆ, ಇಲ್ಲದಿದ್ದರೆ ನಾಯಿಗಳು ಹಿಂಬದಿಯಲ್ಲಿದ್ದವಳನ್ನು ಕಚ್ಚುತ್ತಿದ್ದವು ಎಂದು ಗಾಯಗೊಂಡ ಮಹಿಳೆ ತಿಳಿಸಿದ್ದಾರೆ.

See also  'ಇನ್ನು ಮುಂದೆ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ' ಕನ್ನಡದ ಬದಲಿಗೆ ಇಂಗ್ಲೀಷ್​​ನಲ್ಲೇ ಪ್ರಮಾಣ ವಚನ ಸ್ವೀಕರಿಸಿ ಟ್ರೋಲ್ ಆಗಿದ್ದ ಸಚಿವ ಜಮೀರ್ ಖಾನ್​​​​​​ ಹೊಸ ಆದೇಶ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget