ಕರಾವಳಿಸುಳ್ಯ

ಸುಳ್ಯ ಕೆವಿಜಿ ಎನ್ ಎಂಸಿ ಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮ

309

ನ್ಯೂಸ್ ನಾಟೌಟ್ : ಕೆವಿಜಿ ನೆಹರು ಮೆಮೊರಿಯಲ್ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನವು ನಡೆಯಿತು.

ನೆಹರು ಮೆಮೊರಿಯಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರುದ್ರ ಕುಮಾರ್ ಎಮ್.ಎಮ್. ಅಧ್ಯಕ್ಷತೆ ವಹಿಸಿದ್ದರು.ಈ ಸ್ಪರ್ಧೆಯಲ್ಲಿ ನೆಹರು ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಾದ ದಾಮೋದರ ಟಿ, ರೇಖಾ. ಕೆ, ವಿನುತ.ಕೆ ತೀರ್ಪುಗಾರರಾಗಿ ಭಾಗವಹಿಸಿದ್ದರು.ವಿಜ್ಞಾನ ವಿಭಾಗದ ಎಲ್ಲಾ ಉಪನ್ಯಾಸಕ ವೃಂದದವರು ಹಾಗೂ ವಿಜ್ಞಾನ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

See also  ಹಿಂದೂ ಹೆಣ್ಣು ಮಕ್ಕಳ ತಂಟೆಗೆ, ಮೈ ಮುಟ್ಟಲು ಬಂದ ಪೊರ್ಕಿ ಮುಂಡು ಬ್ಯಾರಿಗಳೇ ಹುಷಾರ್! ಕಾರ್ಕಳದಲ್ಲಿ ವಿವಾದ ಸೃಷ್ಟಿಸಿದ ಬ್ಯಾನರ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget