ಕ್ರೈಂವೈರಲ್ ನ್ಯೂಸ್

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿ! ಪುಟ್ಟ ವಾಹನದಲ್ಲಿ 37 ಮಕ್ಕಳನ್ನು ತುಂಬಿಸಿದ್ದ ಚಾಲಕ..!

ನ್ಯೂಸ್ ನಾಟೌಟ್ : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬೆಳಗಾವಿಯ ಗಣಾಚಾರಿ ಶಿಕ್ಷಣ ಸಂಸ್ಥೆಯ ಎಕ್ಸಲೆಂಟ್ ಎಜುಕೇಷನ್ ಸೊಸೈಟಿಗೆ ಸೇರಿದ ಶಾಲಾ ವಾಹನ ಶುಕ್ರವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ.

ಶಾಲಾ ವಾಹನದಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ಕರೆದೊಯ್ಯದ್ದದ್ದೆ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ವಾಹನದಲ್ಲಿ 37 ಮಕ್ಕಳನ್ನು ತುಂಬಿಸಿಕೊಂಡು ಹಾರೂಗೊಪ್ಪ ಗ್ರಾಮದಿಂದ ಮರಕುಂಬಿ ಗ್ರಾಮದಲ್ಲಿರುವ ಗಣಾಚಾರಿ ಶಾಲೆಗೆ ಕರೆತರುವಾಗ ಈ ಘಟನೆ ನಡೆದಿದೆ. ಪುಟ್ಟ ವಾಹನದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ಆರೋಪ ಕೇಳಿ ಬಂದಿದ್ದು, ಎಲ್ಲ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ವಾಹನ ಪಲ್ಟಿಯಾಗುತ್ತಿದ್ದಂತೆ ಓಡಿ ಹೋಗಿ ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಣ್ಣ ಪುಟ್ಟ ಗಾಯದಿಂದ ಪ್ರಾಣಾಪಾಯದಿಂದ ಎಲ್ಲ ಮಕ್ಕಳು ಪಾರಾಗಿದ್ದಾರೆ. ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Related posts

ತನ್ನದೇ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ! ಈತನ ನೀಚ ಕೃತ್ಯದ ಹಿಂದಿದೆಯ ನಿಗೂಢ ಕಾರಣ!

ಬಂಡೆ ಕುಸಿತ.. 300 ಮಂದಿಯ ಜೀವನ್ಮರಣ ಹೋರಾಟ..! ಏನಿದು ಅನಾಹುತ?

ಕಾಲೇಜಿನಲ್ಲೇ ಯುವಕ-ಯುವತಿಯ ಲವ್ವಿ ಡವ್ವಿ, ವಿಡಿಯೋ ವೈರಲ್ , ಸರಸ ಸಲ್ಲಾಪದಲ್ಲಿದ್ದ ಜೋಡಿಯ ವಿಡಿಯೋ ಮಾಡಿದ ವಿದ್ಯಾರ್ಥಿಗಳು