ಕ್ರೈಂದೇಶ-ಪ್ರಪಂಚ

ಐದು ತಿಂಗಳು ರಜೆಯಲ್ಲಿದ್ದರೂ ಸಂಬಳ ಪಡೆದ ಶಿಕ್ಷಕಿ! ಇಲ್ಲಿದೆ ಸರಕಾರಿ ಶಾಲಾ ಶಿಕ್ಷಕಿ ಮಾಡಿದ ಖತರ್ನಾಕ್ ಪ್ಲಾನ್!

ನ್ಯೂಸ್ ನಾಟೌಟ್: 5 ತಿಂಗಳು ರಜೆಯಲ್ಲಿದ್ದುಕೊಂಡೇ ಸಂಬಳ ಪಡೆಯುತ್ತಿದ್ದ ಬಿಹಾರದ ಮಹಿಳಾ ಶಿಕ್ಷಕಿಯ ಪ್ರಕರಣ ಬೆಳಕಿಗೆ ಬಂದಿದೆ. ಸಂಪನ್ಮೂಲ ಅಧಿಕಾರಿಗಳು ತಪಾಸಣೆಗೆ ಬಂದ ವೇಳೆ ಸಿಕ್ಕಿ ಬಿದ್ದಿರುವ ಘಟನೆ ಗುರುವಾರ ತಿಳಿದುಬಂದಿದೆ.

ಶಿಕ್ಷಕಿ ಸೀಮಾ ಕುಮಾರಿ ಕಳೆದ ಕೆಲ ತಿಂಗಳಿನಿಂದ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಬಿಹಾರದ ಖಗಾರಿಯಾ ಜಿಲ್ಲೆಯ ಸರಕಾರಿ ಶಾಲೆಯೊಂದರ ಸಹಾಯಕಿ ಶಿಕ್ಷಕಿಯಾದ ಇವರು ಕಳೆದ ಐದು ತಿಂಗಳಿನಿಂದ ಗುಜರಾತಿನಲ್ಲಿದ್ದರೂ ಸಹ ಸಂಬಳ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ. ಅಧಿಕಾರಿಗಳಿಗೆ ರೆಕಾರ್ಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆಂದು ಹಾಜರಾತಿ ತೋರಿಸಿ ಸಂಬಳ ಪಡೆಯುತ್ತಿದ್ದರು. ಆದರೆ ಸರಕಾರಿ ಪ್ರಾಥಮಿಕ ಶಾಲೆಗೆ ಬ್ಲಾಕ್ ಶಿಕ್ಷಣಧಿಕಾರಿ ರಾಮ್ ಉದಯ್ ಮಹತೋ ಭೇಟಿ ನೀಡಿ ಪರಿಶೀಲಿಸಿದಾಗ ಕೆಲ ತಿಂಗಳಿನಿಂದ ಶಿಕ್ಷಕಿ ಸೀಮಾ ಕುಮಾರಿ ಗೈರು ಹಾಜರಾಗಿರುವುದು ಬೆಳಕಿಗೆ ಬಂದಿದೆ.

ಅವರನ್ನು ಈ ಶಾಲೆಯ ಡೆಪ್ಯೂಟೇಶನ್ ಮೇಲೆ ನಿಯೋಜಿಸಲಾಗಿತ್ತು. ಬಿಹಾರದ ಶಾಲಾ ಶಿಕ್ಷಕಿ ಐದು ತಿಂಗಳಿನಿಂದ ಗುಜರಾತಿನಲ್ಲಿದ್ದರೂ ಸಹ ಸಂಬಳ ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಶಿಕ್ಷಣ ಇಲಾಖೆಯ ಅಧಿಕಾರಿ ಬಹಿರಂಗಪಡಿಸಿದ್ದಾರೆ.

ಕ್ಷೇತ್ರ ಶಿಕ್ಷಣಧಿಕಾರಿ ರಾಮ್ ಉದಯ್ ಮಹತೋ ಮಾತನಾಡಿ, ಶಿಕ್ಷಕಿ ಸೀಮಾ ಕುಮಾರಿ ಕೆಲಸ ಮಾಡುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯ ಶಿಕ್ಷಕರು ತೋರುವ ಹಾಜರಾತಿ ದಾಖಲೆಗಳ ಅನುಸಾರ ಆಕೆಗೆ ಮಾಸಿಕ ವೇತನ ನೀಡಲಾಗುತ್ತಿತ್ತು.

ಆದ್ದರಿಂದ, ಸೀಮಾ ಕುಮಾರಿ ಹಾಗೂ ಮುಖ್ಯ ಶಿಕ್ಷಕ ವಿಕಾಸ್ ಕುಮಾರರ ವೇತನ ನಿಲ್ಲಿಸುವಂತೆ ಜಿಲ್ಲಾ ಶಿಕ್ಷಣಧಿಕಾರಿಗೆ ನಾವು ವರದಿ ಕಳಹಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲಾಖೆ ಅದರಂತೆ ಕ್ರಮ ತೆಗೆದುಕೊಂಡಿದ್ದು, ಇದೇ ರೀತಿ ಶಾಲೆಗೆ ಗೈರಾಗಿ ಕೆಲಸಕ್ಕೆ ಹೋಗದೇ ಸಂಬಳ ಪಡೆಯುತ್ತಿರುವವರ ಶಂಕೆಯ ಮೇಲೆ ಶಿಕ್ಷಕರ ಮೇಲೆ ಕಣ್ಣಿಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Related posts

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..! ಗಂಭೀರವಾಗಿ ಗಾಯಗೊಂಡ ಚಾಲಕ ಮೃತ್ಯು..!

ಸುಳ್ಯ: ಹಿಂದಿನ ಬಾಗಿಲಿನಿಂದ ನುಗ್ಗಿ ಕಳ್ಳರ ಕೈಚಳಕ, ಓಡಿ ಬಂದ ಮನೆಯೊಡತಿಯ ಕತ್ತಿನಿಂದ ಚಿನ್ನದ ಸರ ಕದ್ದು ಎಸ್ಕೇಪ್..!

ನರ್ಸರಿ ಶಾಲಾ ಕಟ್ಟಡ ದಿಢೀರ್ ಕುಸಿದದ್ದೇಗೆ..? ಭಾರಿ ಅವಘಡದಿಂದ ಮಕ್ಕಳು ಪಾರಾಗಿದ್ದೇಗೆ..?