ರಾಜಕೀಯಶಿಕ್ಷಣ

ಸಿದ್ದು ಸರ್ಕಾರದಿಂದ ಶಾಲಾ ಮಕ್ಕಳಿಗೆ ವಾರದಲ್ಲೊಂದು ದಿನ ಮೊಟ್ಟೆ, ಬಾಳೆ ಹಣ್ಣು..ಯಾವ ವಿದ್ಯಾರ್ಥಿಗಳಿಗೆಲ್ಲ ಸಿಗುತ್ತೆ ಸೌಲಭ್ಯ..?

181

ನ್ಯೂಸ್ ನಾಟೌಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ನೀಡುವುದಕ್ಕೆ ನಿರ್ಧರಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಶುಭ ಕಲ್ಯಾಣ್ ಸುತ್ತೋಲೆ ಬಿಡುಗಡೆ ಮಾಡಿದ್ದಾರೆ. ರಾಜ್ಯಾದ್ಯಂತ ಇರುವ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಸಿಬ್ಬಂದಿಗೆ ಬೇಯಿಸಿದ ಮೊಟ್ಟೆಯನ್ನು ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಪೂರಕವಾಗಿ ನೀಡುವಂತೆ ಸೂಚಿಸಿದ್ದಾರೆ.

ಮೊಟ್ಟೆ ತಿನ್ನದಿರುವವರಿಗೆ ಬಾಳೆಹಣ್ಣು ಅಥವಾ ಚಿಕ್ಕಿ (ಕಡಲೆಕಾಯಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ಖಾದ್ಯ) ನೀಡುವಂತೆ ತಿಳಿಸಿದ್ದಾರೆ.1 ರಿಂದ 8 ನೇ ತರಗತಿಯವರೆಗೆ ಓದುತ್ತಿರುವ ಶಾಲಾ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣುಗಳನ್ನು ನೀಡಲು ಬುಧವಾರ ಆದೇಶ ಹೊರಡಿಸಿದೆ.

ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ಹೋಗಲಾಡಿಸಲು ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೂರಕಗಳನ್ನು ನೀಡಲಾಗುತ್ತಿದೆ. ಜುಲೈ 15ರವಗೆ ಮೊದಲ ಹಂತದಲ್ಲಿ ವಾರಕ್ಕೊಮ್ಮೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲು ನಿರ್ಧರಿಸಲಾಗಿದೆ. ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ಪ್ರತಿಯೊಂದಕ್ಕೂ 8 ರೂ. ನೀಡಿ ಖರೀದಿಸಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಈ ಹಿಂದೆ ಕರ್ನಾಟಕ ಸರ್ಕಾರದ ಈ ನಿರ್ಧಾರ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ಈ ನಿರ್ಧಾರವು ಸಮಾಜದ ಒಂದು ವರ್ಗದವರನ್ನು ಕೆರಳಿಸಿತು. ಮಕ್ಕಳಲ್ಲಿ ತಾರತಮ್ಯ ಉಂಟುಮಾಡುವ ಕಾರಣ ಶಾಲಾ ಆವರಣದಲ್ಲಿ ಮೊಟ್ಟೆಗಳನ್ನು ವಿತರಿಸಬಾರದು ಎಂದು ಒತ್ತಾಯಿಸಿದರು. ಮತ್ತೊಂದು ವಿಭಾಗವು ಈ ಯೋಜನೆಯನ್ನು ನಿಲ್ಲಿಸಬಾರದು ಎಂದು ಪ್ರತಿಪಾದಿಸಿದೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಧಾರ್ಮಿಕ ಗುಂಪುಗಳ ಒತ್ತಡಕ್ಕೆ ಮಣಿದು 2007ರಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ಎಚ್.ಡಿ. ಕುಮಾರಸ್ವಾಮಿ ಹಿಂದಕ್ಕೆ ಪಡೆದಿದ್ದರು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.

See also  ಹೈಕಮಾಂಡ್ ಸಿಎಂ ಆಗು ಅಂದ್ರೆ ನಾನು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ!ಸಿದ್ದರಾಮಯ್ಯ ಹೇಳಿಕೆ ಕಲ್ಲಿನ ಕೆತ್ತಿದ ಶಾಸನವಲ್ಲ ಎಂದದ್ದೇಕೆ..? ಏನಿದು ಸಿಎಂ ಗಾದಿ ಗುದ್ದಾಟ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget