ಕ್ರೈಂಬೆಂಗಳೂರುವೈರಲ್ ನ್ಯೂಸ್

ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಮಾಡಿಸಿದ್ರಾ ಶಿಕ್ಷಕಿ? ಮತ್ತೊಂದು ಅಮಾನವೀಯ ಘಟನೆ ನಡೆದದ್ದೆಲ್ಲಿ? ಮುಖ್ಯ ಶಿಕ್ಷಕಿ ಅಮಾನತ್ತು..?

ನ್ಯೂಸ್ ನಾಟೌಟ್: ಕೋಲಾರದಲ್ಲಿ ಶಾಲಾ ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಪ್ರಕರಣದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಅಂದ್ರಹಳ್ಳಿಯ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಗೃಹ ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿದ್ಯಾರ್ಥಿಗಳ ಪಾಲಕರು ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಈ ವಿದ್ಯಮಾನ ಗಮನಸೆಳೆಯುತ್ತಿರುವಂತೆಯೇ ಶಿಕ್ಷಣ ಇಲಾಖೆಯು ಆಂದ್ರಹಳ್ಳಿಯ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕಿಯನ್ನು ಅಮಾನತ್ತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದ್ರಹಳ್ಳಿಯ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಶೌಚಗೃಹವನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ವಿದ್ಯಮಾನದ ವಿವರ ಪಡೆಯುವುದಕ್ಕಾಗಿ ಅಪರಾಹ್ನ ಸಭೆ ಕರೆಯಲಾಗಿದೆ ಎಂದಿದ್ದರು.

ಶಾಲೆಗಳಲ್ಲಿ ಶೌಚಗೃಹ ಸ್ವಚ್ಛಗೊಳಿಸುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ. ಮಕ್ಕಳನ್ನು ಸರಿಯಾಗಿ ಬೆಳೆಸಬೇಕು. ಅವರನ್ನು ಸಬಲರನ್ನಾಗಿಸಬೇಕು. ನಾವು ಮಕ್ಕಳನ್ನು ದುರ್ಬಳಕೆ ಮಾಡಬಾರದು. ಈ ಹಿಂದೆ ಎನ್‌ಎಸ್‌ಎಸ್‌, ಸೇವಾ ದಳ ಶಿಬಿರಗಳಲ್ಲಿ ಮಕ್ಕಳಿಗೆ ಉದ್ಯಾನ ನಿರ್ಮಾಣ, ಸಸಿ ನಡುವುದು, ಬೀಜ ಬಿತ್ತುವುದು ಮುಂತಾದ ಜೀವನ ಕೌಶಲಗಳನ್ನು ಹೇಳಿಕೊಡುವುದು ಮಾಡುತ್ತಿದ್ದರು. ಆದರೆ ಶೌಚಗೃಹ ಸ್ವಚ್ಛಗೊಳಿಸುವುದಕ್ಕೆ ಬಲವಂತ ಮಾಡುತ್ತಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

Related posts

ಅಜ್ಜಾವರ: ಬೈಕ್-ಜೀಪ್ ನಡುವೆ ಭೀಕರ ಅಪಘಾತ, ಪತಿ ಸಾವು, ಪತ್ನಿ ಗಂಭೀರ

ತಡವಾಗಿ ಬಂದಿದ್ದಕ್ಕೆ ಬಾಯಿಗೆ ಬಂದಂತೆ ಬೈದು, ದೂರು ನೀಡಿದ ಮಹಿಳೆ..! ಆತ್ಮಹತ್ಯೆಗೆ ಶರಣಾದ ಡೆಲಿವರಿ ಬಾಯ್‌ ಯ ‘ಡೆತ್ ನೋಟ್’ ನಲ್ಲೇನಿತ್ತು..?

ವೈರಲ್ ಆಗುತ್ತಿರುವ ‘ಗೃಹ ಲಕ್ಷ್ಮೀ’ ಅರ್ಜಿ ನಕಲಿ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳಿದ್ದೇನು?