ಉಡುಪಿಕರಾವಳಿಕ್ರೈಂಜೀವನ ಶೈಲಿ/ಆರೋಗ್ಯ

ಶಾಲಾ ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ..! 65 ಮಕ್ಕಳು ಪಾರಾದದ್ದೇಗೆ..?

ನ್ಯೂಸ್ ನಾಟೌಟ್: ಶಾಲಾ ಬಸ್ ಚಾಲಕನಿಗೆ ಬಸ್ ಚಲಾಯಿಸುತ್ತಿರುವಾಗಲೇ ಲಘು ಹೃದಯಾಘಾತವಾಗಿದ ಘಟನೆ ಉಡುಪಿಯ ಪೆರಂಪಳ್ಳಿ ಎಂಬಲ್ಲಿ ಇಂದು (ಜೂನ್.5) ಸಂಜೆ ನಡೆದಿದೆ. ಹೃದಯಾಘಾತಕ್ಕೆ ಒಳಗಾದ ಚಾಲಕನ ಸಮಯ ಪ್ರಜ್ಞೆಯಿಂದ ಹಲವು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ರಹ್ಮಾವರದ ಖಾಸಗಿ ಶಾಲೆಯೊಂದರ ವಾಹನವು ಸುಮಾರು 65 ಮಕ್ಕಳನ್ನು ಕರೆದುಕೊಂಡು ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಹೋಗುತ್ತಿತ್ತು.

ದಾರಿ ಮಧ್ಯೆ ಐವರು ಮಕ್ಕಳ ಇಳಿಸಿದ ಬಸ್, ಪೆರಪಂಳ್ಳಿ ಬಳಿ ಹೋಗುತ್ತಿದ್ದಾಗ ಚಾಲಕ ಆಲ್ವಿನ್ ಡಿಸೋಜ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ. ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆಯ ಬದಿಯ ಚರಂಡಿ ಬದಿಯ ಪೊದೆಗೆ ತಾಕುವಂತೆ ನಿಲ್ಲಿಸಿದ್ದಾರೆ. ಇದರಿಂದ ಕೆಲವು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ತೀವ್ರವಾಗಿ ಅಸ್ವಸ್ಥರಾಗಿರುವ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Click 👇

https://newsnotout.com/2024/06/congress-meeting-and-govt-forming-issue
https://newsnotout.com/2024/06/narendra-modi-and-oath-taking-date-fix
https://newsnotout.com/2024/06/meloni-modi-wish-by-meloni-itali-to-narendra-modi

Related posts

ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ನಕಲಿ ಯುಪಿಐ ಐಡಿಗಳು..! ರೂಂ ಬುಕ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ಭಕ್ತರಿಗೆ ಮಠದಿಂದ ಸೂಚನೆ..!

ಮಂಗಳೂರು: ದೇವಸ್ಥಾನ ಬಳಿ ಯುವಕನಿಗೆ ಚೂರಿ ಇರಿತ..! ಏನಿದು ಘಟನೆ..?

ಕಲ್ಲುಗುಂಡಿ: ಬೆಲೆಬಾಳುವ ಮಣ್ಣಿನ ಮಡಿಕೆಗಳನ್ನು ಹೊತ್ತೊಯ್ದ ಕಳ್ಳರು..! ತಡರಾತ್ರಿ ಕಿಡಿಗೇಡಿಗಳಿಂದ ಕೃತ್ಯ..!