ಕ್ರೈಂಬೆಂಗಳೂರುವೈರಲ್ ನ್ಯೂಸ್

ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸಿದ್ರಾ ಚಾಲಕರು..? 16 ಚಾಲಕರ ವಾಹನ ಪರವಾನಗಿ ಪತ್ರ ಆರ್.​ಟಿ.ಒ ಗೆ ರವಾನೆ

ನ್ಯೂಸ್ ನಾಟೌಟ್: ಶಾಲಾ ವಾಹನ ಚಾಲಕರ (School Bus Drivers) ವಿರುದ್ಧ ಸಂಚಾರಿ ಪೊಲೀಸರು ಕಾರ್ಯಾಚರಣೆಗೆ ನಡೆಸಿದ್ದು, ಬೆಂಗಳೂರಿನಲ್ಲಿ ಇಂದು(ಜ.23) ಬೆಳಗ್ಗೆ 7ರಿಂದ 9.30ರವರೆಗೆ ಶಾಲಾ ವಾಹನಗಳ ತಪಾಸಣೆ ನಡೆಸಿದ್ದು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸುತ್ತಿದ್ದ ಚಾಲಕರು ಸಿಕ್ಕಿಬಿದ್ದಿದ್ದಾರೆ (Drink And Drive). ಕುಡಿದು ವಾಹನ ಚಲಾಯಿಸುತ್ತಿದ್ದವರ ವಿರುದ್ಧ ದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು ಸಂಚಾರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ 7ರಿಂದ 9.30ರವರೆಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸುಮಾರು 3,414 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ್ದು ಈ ಪೈಕಿ 16 ಚಾಲಕರು ಮದ್ಯಸೇವಿಸಿ ಶಾಲಾ ವಾಹನ ಚಾಲನೆ ಮಾಡಿದ್ದು ಬೆಳಕಿಗೆ ಬಂದಿದೆ.

16 ಶಾಲಾ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕುಡಿದು ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. 16 ಚಾಲಕರ ವಾಹನ ಪರವಾನಗಿ ಪತ್ರ ಆರ್​ಟಿಒ ಕಚೇರಿಗೆ ರವಾನಿಸಲಾಗಿದೆ.

ಶಾಲಾ ಮಕ್ಕಳನ್ನು ಕರೆತರುವ ಎಲ್ಲಾ ಬಗೆಯ ವಾಹನಗಳ ಚಾಲಕರು ಮತ್ತು ಸಹಾಯಕರು ಪೊಲೀಸರಿಂದ ಪಡೆದ ಸನ್ನಡತೆಯ ಪ್ರಮಾಣಪತ್ರವನ್ನು ಸಲ್ಲಿಸುವುದನ್ನು ಶಾಲಾ ಶಿಕ್ಷಣ ಇಲಾಖೆ ಈ ಹಿಂದೆ ಕಡ್ಡಾಯಗೊಳಿಸಿತ್ತು.

ಇನ್ನು ಈ ಘಟನೆ ಸಂಬಂಧ ಸಂಚಾರ ಜಂಟಿ ಪೋಲೀಸ್ ಆಯುಕ್ತ ಎಂ. ಎನ್.ಅನುಚೇತ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು(ಜ.೨೩) ಬೆಳಗ್ಗೆ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲಾ ಶಾಲಾ ವಾಹನ ಚಾಲಕರನ್ನ ತಪಾಸಣೆ ಮಾಡಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ವಾಹನಗಳನ್ನ ಪರಿಶೀಲನೆ ಮಾಡಲಾಗಿದೆ. ಈ ವೇಳೆ 16 ಚಾಲಕರು ಕುಡಿದು ವಾಹನ ಚಾಲನೆ ಮಾಡಿರೋದು ಕಂಡು ಬಂದಿದೆ. ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಕ್ರಮ ಕೈಗೊಳ್ಳಲಾಗ್ತಿದೆ.

https://newsnotout.com/2024/01/bala-rama-benglore-ram-mandir/

Related posts

ತನ್ನ ಪ್ರಿಯಕರ ನನಗೆ ಮದುವೆಯಾಗಿದೆ ಎಂದದ್ದಕ್ಕೆ ಬಿಸಿನೀರು ಎರಚಿದ ವಿವಾಹಿತೆ..! ಬರ್ತಡೇ ಇದೆ ಬಾ ಎಂದು ಕರೆದಾಕೆ ಮಾಡಿದ್ದಳು ಖತರ್ನಾಕ್ ಪ್ಲಾನ್!

ಹೂಡಿಕೆಯಲ್ಲಿ ಅಧಿಕ ಲಾಭ ನೀಡುವುದಾಗಿ ಜನರನ್ನು ನಂಬಿಸಿ 27.96 6 ಲಕ್ಷ ರೂ. ವಂಚಿಸಿದ ವಿದ್ಯಾರ್ಥಿ!

ವಿಮಾನದೊಳಗೆ ಬೆತ್ತಲೆ ಓಡಾಡಿದ ಪ್ರಯಾಣಿಕ..! ಟೇಕಾಫ್​ ಆದ ವಿಮಾನ ಮತ್ತೆ ಹಿಂದಿರುಗಿದ್ದೇಕೆ..?