ವಿಡಿಯೋವೈರಲ್ ನ್ಯೂಸ್

ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸ್ಬಹುದು..! ರಾಖಿ ಹಬ್ಬಕ್ಕೆ ಏನಿದು ಈಕೆಯ ವಿಚಿತ್ರ ಡಿಜಿಟಲ್ ಕ್ರಾಂತಿ? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್​ ಎನ್ನಲಾಗುವ ವ್ಯವಸ್ಥೆ ಕೆಲವು ಯೋಜನೆಗಳಲ್ಲಿದೆ. ಆದರೆ ಇಲ್ಲೊಂದು ಕಡೆ ಮದುವೆಯೊಂದರಲ್ಲಿ ವಿಚಿತ್ರ ಡಿಜಿಟಲ್ ಕ್ರಾಂತಿ ನಡೆದಿದೆ.

ಡಿಜಿಟಲ್ ತಂತ್ರಜ್ಞಾನವನ್ನು ಜನರು ಹಲವಾರು ರೀತಿಯಲ್ಲಿ ಬಳಸುತ್ತಿದ್ದು, ಹಣದ ವಹಿವಾಟಿನಲ್ಲೂ ಇದನ್ನೂ ಪೂರ್ಣಪ್ರಮಾಣದಲ್ಲಿ ಹಲವರು ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ನಗದುರಹಿತ ವ್ಯವಹಾರ ಮಾಡುತ್ತಿದ್ದಾರೆ. ಮನೆಯಿಂದ ಹೊರಡುವಾಗ ಮರೆತು ಪರ್ಸ್ ಬಿಟ್ಟು ಹೋದರೂ ಚಿಂತೆ ಇಲ್ಲ ಎಂಬ ನಿರಾಳತೆಯಲ್ಲಿ ಈಗಿನ ಜನರಿದ್ದಾರೆ.

ಇನ್ನು ಕೆಲವು ಕಡೆ ದೇವಸ್ಥಾನದಲ್ಲಿ ಆರತಿ ತಟ್ಟೆಗೆ ಕಾಣಿಕೆ ಹಾಕಲಿಕ್ಕೂ, ಮತ್ತೆ ಕೆಲವು ಕಡೆ ಭಿಕ್ಷೆ ಹಣಕ್ಕೂ ಯುಪಿಐ ಪೇಮೆಂಟ್​, ಕ್ಯೂಆರ್​ ಕೋಡ್ ಮೂಲಕ ಹಣ ಪಾವತಿ ನಡೆದ ಅನೇಕ ನಿದರ್ಶನಗಳಿಗೆ.

ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಇಲ್ಲೊಬ್ಬಳು ಯುವತಿ ಡಿಜಿಟಲ್ ಮೆಹಂದಿ ಹಾಕಿಕೊಂಡಿದ್ದಾಳೆ. ಈಕೆಯಿಂದ ರಾಖಿ ಕಟ್ಟಿಸಿಕೊಂಡವರು ಉಡುಗೊರೆಯಾಗಿ ನಗದನ್ನೇ ಕೊಡಬೇಕಾಗಿಲ್ಲ. ಬದಲಿಗೆ ಈಕೆಯ ಕೈಯನ್ನು ಸ್ಕ್ಯಾನ್ ಮಾಡಿದರೂ ಸಾಕು, ಹಣ ಸಂದಾಯ ಮಾಡಿ ಬಿಡಬಹುದು. ಅಂದರೆ, ಖಾತೆಯ ಕ್ಯೂಆರ್​ ಕೋಡ್​ ಈಕೆಯ ಕೈ ಮೇಲಿನ ಮೆಹಂದಿಯಲ್ಲಿ ಮೂಡಿ ಬರುವಂತೆ ಮಾಡಲಾಗಿದೆ. ಕೈ ಮೇಲಿನ ಆ ಮೆಹಂದಿ ಮೇಲೆ ಮೊಬೈಲ್​ಫೋನ್​ನಿಂದ ಸ್ಕ್ಯಾನ್ ಮಾಡಿದರೆ ಖಾತೆಯ ಪೇಮೆಂಟ್ ಗೇಟ್​ವೇ ತೆರೆದುಕೊಳ್ಳುತ್ತದೆ.

ಈ ಕುರಿತ ವಿಡಿಯೋ ತುಣುಕನ್ನು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಮೂಲಕ ವೈರಲ್ ಆಗುತ್ತಿದೆ.

Related posts

ರೈಲ್ವೇ ಹಳಿಗಳ ಮೇಲೆ ಕಲ್ಲಿಟ್ಟ ಅಪ್ರಾಪ್ತ ಬಾಲಕ…! ಬಾಲಕನ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಸಭೆಯ ವೇಳೆ ಅಸ್ವಸ್ಥಗೊಂಡಿದ್ದ ಖರ್ಗೆ, ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದ ಖರ್ಗೆ..!

ಸುಧಾಮೂರ್ತಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ ರಾಷ್ಟ್ರಪತಿ, ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು..?