ನ್ಯೂಸ್ ನಾಟೌಟ್: ಹಣ ಉಳಿತಾಯ ಮಾಡಬೇಕೆಂಬ ಕಾರಣಕ್ಕೆ ಚೀನಾದ ಯುವತಿಯೊಬ್ಬಳು ತಾನು ದುಡಿಯುತ್ತಿರುವ ಮಳಿಗೆಯ ಶೌಚಾಲಯದಲ್ಲಿ ವಾಸಿಸುತ್ತಿದ್ದಾಳೆ.
ಯಾಂಗ್ ಎಂಬ ಯುವತಿ ಅದಕ್ಕಾಗಿ ಶೌಚಾಲಯಕ್ಕೆ 545 ರೂ.ಗಳ ಮಾಸಿಕ ಬಾಡಿಗೆ ನೀಡುತ್ತಿದ್ದಾಳೆ ಎನ್ನಲಾಗಿದೆ.
ತಿಂಗಳಿಗೆ 34,570 ರೂ. ಸಂಬಳ ಪಡೆಯುತ್ತಿರುವ ಈಕೆ, ಹಣವನ್ನು ಉಳಿಸಿ ಸ್ವಂತ ಮನೆ ಮತ್ತು ಕಾರು ಕೊಳ್ಳುವ ಕನಸು ಹೊತ್ತಿದ್ದಾಳೆ. ಶೌಚಾಲಯದಲ್ಲೇ ನಿದ್ದೆ, ಅಡುಗೆ ಹೀಗೆ ಜೀವನ ನಡೆಸಲು ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾಳೆ.